ಬೆಳ್ಳಾರೆ : ಮೋದಿ ಪರಿವಾರ’ ಸ್ಟಿಕರ್ ಅಳವಡಿಕೆ ಕಾರ್ಯಕ್ರಮಕ್ಕೆ ಶುಕ್ರವಾರ ಬೆಳ್ಳಾರೆಯಲ್ಲಿ ಚಾಲನೆ ನೀಡಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ಬೆಳ್ಳಾರೆಯ ಪಂಚಾಯತ್ ಸದಸ್ಯ ದಿನೇಶ್ ಅವರ ನಿವಾಸದಲ್ಲಿ ಚಾಲನೆ ನೀಡಿದರು.
ದೇಶದ ಜನತೆ ನರೇಂದ್ರ ಮೋದಿ ಅವರ ಜೊತೆಗಿದ್ದಾರೆ. ದೇಶವೇ ಒಂದು ಮೋದಿ ಪರಿವಾರ ಎಂಬುವುದನ್ನು ಸಾರಲು ವಾಹನಗಳಿಗೆ ‘ಮೋದಿ ಪರಿವಾರ’ ಸ್ಟಿಕರ್ ಅಳವಡಿಕೆ ಕಾರ್ಯಕ್ರಮಕ್ಕೆ ಸಂಸದರು ಚಾಲನೆ ನೀಡಿದರು.
ಈ ಸಂದರ್ಭ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.