ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಶಿವರಾತ್ರಿ ದಿನವಾದ ಶುಕ್ರವಾರ ಮೃತಪಟ್ಟಿದೆ.
60ವರ್ಷ ಪ್ರಾಯದ ಲತಾ ಕಳೆದ 50 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯಲ್ಲಿ ನಿರತವಾಗಿತ್ತು.
ಶುಕ್ರವಾರ ಮಧ್ಯಾಹ್ನದ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಧರ್ಮಸ್ಥಳದ ಜಾತ್ರಾ ಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಎಲ್ಲರ ಚಿತ್ತ ಸೆಳೆಯುತ್ತಿದ್ದಳು.
ವಿಶೇಷವೆಂದರೆ ಲತಾ ಆನೆ ಶಿವಾನಗೆ ತಾಯಿಯಾಗಿ ಪ್ರೀತಿಯಿಂದ ವರ್ತಿಸುತ್ತಿತ್ತು. ಲತಾ ಆನೆಯನ್ನು ಕಳೆದುಕೊಂಡಿರುವ ಶಿವಾನಿ ಹಾಗೂ ಲಕ್ಷ್ಮಿ ಇಬ್ಬರು ಮಂಕಾಗಿದ್ದಾರೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ బళి ಆಗಮಿಸುತ್ತಿದ್ದಾರೆ.