ಇಂಡಿಯನ್ ರೋಡ್ ಕಾಂಗ್ರೆಸ್ ತಾಂತ್ರಿಕ ಸಮಿತಿ ಸದಸ್ಯರಾಗಿ ಹರ್ಷಕುಮಾರ್ ರೈ ಮಾಡಾವು ನೇಮಕ

ಪುತ್ತೂರು: ಭಾರತ ಸರಕಾರ ಸಾಮ್ಯದ ಇಂಡಿಯನ್ ರೋಡ್ ಕಾಂಗ್ರೆಸ್ ನ ತಾಂತ್ರಿಕ ಸಮಿತಿಗೆ ಸದಸ್ಯರಾಗಿ ಪುತ್ತೂರಿನ ಹೈವೇ ಇಂಜಿನಿಯರ್ ಹರ್ಷ ಕುಮಾರ್ ರೈ ಮಾಡಾವು ನೇಮಕಗೊಂಡಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆರ್ಕಿಟೆಕ್ಟ್ ಮತ್ತು ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು ಬೈಟ್ ವೇ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದಾರೆ.

ಇಂಡಿಯನ್ ರೋಡ್ ಕಾಂಗ್ರೆಸ್ 1934 ಇಸವಿಯಲ್ಲಿ ಸ್ಥಾಪನೆಗೊಂಡಿದ್ದು, ನವದೆಹಲಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದೆ. ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಹೊಸ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನ ಅನುಷ್ಠಾನಗೊಳಿಸುವುದು ಹಾಗೂ ರಸ್ತೆಯ ಬಗ್ಗೆ ಸಂಶೋಧನೆ ನಡೆಸಿ, ತಾಂತ್ರಿಕ ಬದಲಾವಣೆ ತರುವಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸಲಹೆ ಸೂಚನೆ ನೀಡುವ ಜವಬ್ದಾರಿ ನಿರ್ವಹಿಸುತ್ತದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top