ರಾಮೇಶ್ವರಂ ಕೆಫೆ ಬ್ಲಾಸ್ಟ್ ಶಂಕಿತನ ರೇಖಾಚಿತ್ರ ಬಿಡುಗಡೆ

ಬೆಂಗಳೂರು : ರಾಮೇಶ್ವರಂ ಕೆಫೆ ಬ್ಲಾಸ್ಟ್‌ನ ಶಂಕಿತ ಉಗ್ರನ ಸುಳಿವಿಗೆ 10 ಲಕ್ಷ ನಗದು ಬಹುಮಾನ ಘೋಷಣೆ ಬೆನ್ನಲ್ಲೇ ಬಾಂಬರ್‍ ನ ರೇಖಾಚಿತ್ರವನ್ನು ಸಿಸಿಬಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಬಾಂಬರ್‍ ನ ಸಿಸಿಟಿವಿ ಫೋಟೋವನ್ನು ಬುಧವಾರ ಎನ್‌ಐಎ ಬಿಡುಗಡೆ ಮಾಡಿತ್ತು. ಆದರೆ ಬಾಂಬರ್‍ ನ ಚಹರೆ ದೃಶ್ಯ ಸಮರ್ಪಕವಾಗಿ ಸ್ಪಷ್ಟವಾಗದ ಹಿನ್ನಲೆಯಲ್ಲಿ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಸಿಸಿ ಟಿವಿ ದೃಶ್ಯ ಬಿಡುಗಡೆಗೊಂಡಾಗ ಆರೋಪಿಯನ್ನು ನೋಡಿದ್ದಾಗಿ ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬಂದಿವೆ ಈ ಹಿನ್ನಲೆಯಲ್ಲಿ ರೇಖಾಚಿತ್ರ ಬಿಡುಗಡೆ ಮಾಡಲು ಸಿಸಿಬಿ ತಯಾರಿ ನಡೆಸಿತ್ತು.

ಖ್ಯಾತ ಸ್ಕೆಚ್ ಆರ್ಟಿಸ್ಟ್‌ನಿಂದ ಬಾಂಬರ್‌ನ ಇಮ್ಯಾಜಿನರಿ ಸ್ಕೆಚ್ ಬಿಡಿಸಲಾಗಿದೆ. ಸ್ಕೆಚ್ ಆರ್ಟಿಸ್ಟ್ ಎನ್ ಐಎ ಬಿಡುಗಡೆ ಮಾಡಿದ ಸಿಸಿಟಿವಿ ಫೋಟೋವನ್ನು ಆಧರಿಸಿ ಸಂಪೂರ್ಣ ಮುಖದ ಇಮ್ಯಾಜಿನರಿ ಸ್ಕೆಚ್ ಮಾಡಿದ್ದಾರೆ. ಆರ್ಟಿಸ್ಟ್ ಹರ್ಷ ಅವರು ಈ ರೇಖಾಚಿತ್ರವನ್ನು ಬಿಡಿಸಿದ್ದಾರೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top