ಪುತ್ತೂರು: ತುಮಕೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ತೆರಳುತ್ತಿದ್ದ ವೇಳೆ ಪೊಲೀಸ್ ವಶವಾದ ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರು ಬಿಡುಗಡೆಗೊಂಡು ಪುತ್ತೂರಿಗೆ ಆಗಮಿಸಿದಾಗ ಕಾರ್ಯಕರ್ತರು ಅವರನ್ನು ಬೊಳುವಾರಿನಲ್ಲಿ ಕೇಸರಿ ಶಲ್ಯ ಹಾಕುವ ಮೂಲಕ ಸ್ವಾಗತಿಸಿದರು.
ಮುರಳೀಕೃಷ್ಣ ಹಸಂತಡ್ಕ ಅವರು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಎದುರು ಕಾರಿನಿಂದ ಇಳಿದು ಆಂಜನೇಯ ಸ್ವಾಮಿಗೆ ನಮಸ್ಕರಿಸಿ ಕಾರ್ಯಕರ್ತರಿಂದ ಶಲ್ಯ, ಹಾರವನ್ನು ಪಡೆದು ಕೊಂಡರು.
ಅವರ ಜೊತೆಗಿದ್ದ ವಿಹಿಂಪದ ಜಯಂತ್ ಕುಂಜೂರುಪಂಜ ಅವರಿಗೂ ಶಲ್ಯ ಹಾಕಿ ಸ್ವಾಗತಿಸಲಾಯಿತು.