ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಕಡಬದ ವಿದ್ಯಾರ್ಥಿನಿಗಳ ಮೇಲೆ ಅಬೀನ್ ಎಂಬಾತನಿಂದ ಆ್ಯಸಿಡ್ ದಾಳಿ ನಡೆದಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವ ವಿಷಯಾವಾಗಿದ್ದು ಈ ಕೃತ್ಯವನ್ನು ಪುತ್ತಿಲ ಪರಿವಾರ ಖಂಡಿಸುತ್ತದೆ.
ಇಂದು ಬೆಳಗ್ಗೆ ಅಲೀನಾ, ಅರ್ಚನ, ಅಮೃತ ಎನ್ನುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಅಬೀನ್ ಎಂಬಾತ ಆ್ಯಸಿಡ್ ದಾಳಿ ನಡೆಸಿದ್ದಾನೆ. ಒಬ್ಬಾಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅತಿಯಾದ ಅಲ್ಪಸಂಖ್ಯಾತ ಓಲೈಕೆಯಿಂದ ಭಯವೇ ಇಲ್ಲದಂತಾಗಿದೆ.
ದಕ್ಷಿಣ ಕನ್ನಡದಲ್ಲಂತು ಗಾಂಜಾ, ಕಳ್ಳತನ, ಕೊಲೆ ಪ್ರಕರಣಗಳು, ತಲವಾರು ದಾಳಿಗಳು, ಲವ್ ಜಿಹಾದ್, ಗೋವು ಕಳ್ಳತನ, ಹಲ್ಲೆ ಅತಿಯಾಗಿ ಈ ಸರ್ಕಾರ ಆಡಳಿತಕ್ಕೆ ಬಂದ ನಂತರ ಆಗುತ್ತಿದ್ದು, ಇದೀಗ ವಿದ್ಯಾರ್ಥಿನಿಗಳ ಮೇಲೆ ಆ್ಯಸಿಡ್ ಪ್ರಕರಣವಂತು ಆಡಳಿತ ವೈಫಲ್ಯಕ್ಕೆ ಸಾಕ್ಷೀಕರಿಸಿದೆ. ಜಿಲ್ಲೆಯಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದೆ.
ಸರ್ಕಾರ ಕಾನೂನು ಸುವ್ಯವಸ್ಥೆ ಬಗ್ಗೆ ಎಚ್ಚರವಾಗದಿದ್ದರೆ ಜನತೆಯೇ ಬೀದಿಗಿಳಿಯಬೇಕಾದ ಸ್ಥಿತಿ ನಿರ್ಮಾಣವಾಗಬೇಕಾದಿತು ಎಂದು ಪುತ್ತಿಲ ಪರಿವಾರ ಎಚ್ಚರಿಕೆ ನೀಡಿದೆ.