ಚಾರ್ವಾಕ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದಿಂದ ಮೇಳೈಸಿದ ಹೊನಲು ಬೆಳಕಿನ ಮಹಾ ಹಗ್ಗಜಗ್ಗಾಟ, ಮನೋರಂಜನಾ ಕ್ರೀಡೆ

ಚಾರ್ವಾಕ: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ನೇತೃತ್ವದಲ್ಲಿ ಪುತ್ತೂರು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಕಾರದೊಂದಿಗೆ 4ನೇ ವರ್ಷದ ಅಂತರಾಜ್ಯ ಮತ್ತು ಕಾಲೇಜು ವಿಭಾಗ ಹಾಗೂ ವಲಯ ಮಟ್ಟದ ಹೊನಲು ಬೆಳಕಿನ ಮಹಾ ಹಗ್ಗಜಗ್ಗಾಟ ಮತ್ತು ಮನೋರಂಜನಾ ಕ್ರೀಡೆ ಶನಿವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಚಾರ್ವಾಕ ಕುಮಾರಧಾರ ಫಾರ್ಮ್ಸ ನ ವಿಜಯಕುಮಾರ್ ಸೊರಕೆ ವಿಜಯ ಕುಮಾರ್ ಸೊರಕೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೈಪಿಲ ಕ್ರೀಡಾ ಸೇವಾ ಸಂಘದವರು ಒಳ್ಳೆಯ ಕಾರ್ಯ ಮಾಡುತ್ತಾ ಬಂದಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. ಹಳ್ಳಿ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯುವುದು ಕಮ್ಮಿ. ಆದರೆ ಈ ವ್ಯವಸ್ಥೆಯನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿಕೊಂಡು ಬರುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ಆಗ ವ್ಯಕ್ತಿಯ ಜತೆ ಆ ಗ್ರಾಮ ಬೆಳೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ ಮಾತನಾಡಿ, ದೈಪಿಲ ಕ್ರೀಡಾ ಸೇವಾ ಸಂಘ  ದೇಶಭಕ್ತಿಯ ಸಂಘಟನೆ. ಕಾರ್ಯಕ್ರಮ ಆಯೋಜಿಸುವ ಮೂಲಕ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.





















































 
 

ಕಾಣಿಯೂರು ಗ್ರಾಮ ಪಂಚಾಯತ್‍ನ ವಿಶ್ವನಾಥ ಕೊಪ್ಪ ಮಾತನಾಡಿ, ಕ್ರೀಡೆ ಎಂಬುದು ಕಲೆ. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯ. ಜಾತಿ-ಧರ್ಮವಿಲ್ಲದೆ ಒಟ್ಟಾಗಿ ಬೆರೆತು ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೈಪಿಲ ಕ್ರೀಡಾ ಸಂಘ ಹಲವಾರು ಸಮಾಜ ಉಪಯೋಗಿ ಕೆಲಸ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶಂಭು ನಾರಾಯಣ ಖಾರ್ವಿ, ಗ್ರಾಪಂ ಉಪಾಧ್ಯಕ್ಷ, ಚಾರ್ವಾಕ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ವಿಶ್ವನಾಥ ಕೊಪ್ಪ, ಧರ್ನಪ್ಪ ಗೌಡ ಅಂಬುಲ, ಸಂಘದ ಮಾಜಿ ಅಧ್ಯಕ್ಷ ಹರೀಶ ಕೆಳಗಿನಕೇರಿ ಶುಭ ಹಾರೈಸಿದರು.

ಬೆಂಗಳೂರು ಸೆವೆನ್ ಲೂಪ್‍ ಟೆಕ್ನಾಲಜೀಸ್ ಪ್ರೈ.ಲಿ. ಸಿಇಒ ಉದ್ಯಮಿ ಶರಣ್ ಉರುಬೈಲು ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸೇವಾ ಸಂಘದ ಗೌರವಾಧ್ಯಕ್ಷ ರಾಮುಡೇಲು ಮೋಹನ್ ಕೆ.ಪಿ. ಶ್ರೀ ಕ್ಷೇತ್ರ ದೈಪಿಲದ ಪ್ರಧಾನ ಕಾರ್ಯದರ್ಶಿ ನಾಗೇಶ್ ಖಂಡಿಗ, ಬೆಳ್ಳಿಯಪ್ಪ ಗೌಡ ದೇವಸ್ಯ, ರಾಜೇಶ್‍ಖಂಡಿಗ, ಶಂಭು ನಾರಾಯಣ ಖಾರ್ವಿ, ಉಪಸ್ಥಿತರಿದ್ದರು.

ದಿವಿಶ್ ಖಂಡಿಗ, ವಿಜಯ ಬೈಲು, ಪದ್ಮನಾಭ, ನಾಗೇಶ್ ಖಂಡಿಗ, ಬೆಳಿಯಪ್ಪ ದೇವಸ್ಯ, ತಾರನಾಥ ಖಂಡಿಗ, ನಾರಾಯಣ ಖಂಡಿಗ, ಪುರುಷೋತ್ತಮ ಖಂಡಿಗ, ವಿಶ್ವನಾಥ ಖಂಡಿಗ, ಹರೀಶ್, ಹೇಮಂತ್ ದೇವಸ್ಯ, ಜಗದೀಶ್ ಖಂಡಿಗ ಅತಿಥಿಗಳನ್ನು ಗೌರವಿಸಿದರು.

ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಪ್ರೇರಣಾ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರವೀಣ್ ಕುಂಟ್ಯಾನ ಸ್ವಾಗತಿಸಿದರು. ರಾತ್ರಿ 7 ರಿಂದ ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಮತ್ತು ಬಳಗದವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top