ಸಾಹಿತ್ಯ ಎನ್ನುವುದು ನಮ್ಮನ್ನು ಬೆಸೆಯುವಂತದ್ದು | ಬಾಳಿಗೆ ಬೆಳಕು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಸ್ಕರ್ ಕೋಡಿಂಬಾಳ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಂಯುಕ್ತ ಆಶ್ರಯದಲ್ಲಿ ಯುವ ಕವಯತ್ರಿ ಪ್ರಿಯಾ ಸುಳ್ಯರವರ ಬಾಳಿಗೆ ಬೆಳಕು ಕೃತಿ ಬಿಡುಗಡೆ ಸಮಾರಂಭ ಮನಿಷಾ ಸಭಾಂಗಣದಲ್ಲಿ ನಡೆಯಿತು.

ದೀಪ ಪ್ರಜ್ವಲಿಸಿ ಮಾತನಾಡಿದ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಮಾತನಾಡಿ, ಸಾಹಿತ್ಯ ಎನ್ನುವುದು ನಮ್ಮನ್ನ ಬೆಸೆಯುವಂತದ್ದು. ಸಾಹಿತಿಗಳು ಬರೆದಂತೆ ನಡೆಯುವ ಗುಣ ಹೊಂದಿರುವವರಾಗಿದ್ದಲ್ಲಿ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ ಎಂದು ಕೃತಿಕಾರರಿಗೆ ಅಭಿನಂದಿಸಿದರು.

ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ವಿಶೇಷ ಆಹ್ವಾನಿತರಾಗಿ ಮಾತನಾಡಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಿರಿಯ, ಕಿರಿಯ ಸಾಹಿತಿಗಳನ್ನು ಒಗ್ಗೂಡಿಸಿ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.



































 
 

ಈ ಸಂದರ್ಭದಲ್ಲಿ ರಾಜಧಾನಿ ದೆಹಲಿಯಲ್ಲಿ ಕನ್ನಡ ಡಿಂಡಿಮವನ್ನು ಮೊಳಗಿಸಿದ ಹಾಗೂ ಕನ್ನಡ ಪರ ಸೇವೆಗಾಗಿ ವಸಂತ ಶೆಟ್ಟಿ ಬೆಳ್ಳಾರೆ ಅವರನ್ನು ಸನ್ಮಾನಿಸಲಾಯಿತು 

ಕ್ರಾಫ್ಟ್ ಮನೆಯ ಮಾದರಿಯನ್ನು ತಯಾರಿಸಿ ಅದರೊಳಗಿದ್ದ ಬ್ಯಾಟರಿ ಚಾಲಿತ ವಿದ್ಯುತ್ ದೀಪದ ಬಟನ್ ಅದುಮಿ ಬೆಳಕು ಚೆಲ್ಲಿ ಮನೆಯ ಒಳಗಿಂದ ಬಾಳಿಗೆ ಬೆಳಕು ಕೃತಿಯನ್ನು ಸೇರಿರುವ ಗಣ್ಯರ ಕೈಗೆ ಹಸ್ತಾಂತರ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಸ. ಉ. ಹಿ. ಪ್ರಾ. ಶಾಲೆ ಪಡ್ನೂರು ಇಲ್ಲಿನ 9ನೇ ತರಗತಿ ವಿದ್ಯಾರ್ಥಿನಿ ಕು. ಮಣಿ ಕೃತಿ ಲೋಕಾರ್ಪಣೆ ಮಾಡಿದರು.

ಕೃತಿ ಕಾರರಾದ ಪ್ರಿಯಾ ಸುಳ್ಯ ಎಲ್ಲರ ಸಹಕಾರ ನೀಡಿದವರನ್ನು ಸ್ಮರಿಸುತ್ತಾ ತಮ್ಮ ಮನದಾಳದ ಮಾತುಗಳನ್ನಾಡಿದರು. ಯುವ ಪ್ರತಿಭೆಗೆ ಗೌರವಾರ್ಪಣೆ ಇತ್ತೀಚೆಗೆ  ಶಾಂಭವಿ ವಿಜಯ ಯಕ್ಷಗಾನದಲ್ಲಿ ಶ್ರೀದೇವಿಯಾಗಿ ಮಿಂಚಿದ ಕುಮಾರಿ ಮೆಲಿಷಾ ಮಸ್ಕರೇನಸ್ ಅವರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಬಿ. ಸುಂದರ ರೈ, , ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಸಾಮಾಜಿಕ ಹೋರಾಟಗಾರ ಸುಭಾಷ್ ಎಸ್. ಬೆಂಗಳೂರು, ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷ ಚಂದ್ರಮೌಳಿ ಕಡಂದೇಲು ಶುಭ ಹಾರೈಸಿದರು. ಪತ್ರಕರ್ತ ರಾಜು ಬೆಂಗಳೂರು ಕೃತಿಕಾರರ ಪರಿಚಯ ಮಾಡಿದರು, ಯುವ ಸಾಹಿತಿ ವಿಂಧ್ಯಾ ಎಸ್. ರೈ ಕೃತಿ ಪರಿಚಯ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಕು. ಅಪೂರ್ವ ಕಾರಂತ್ ಸ್ವಾಗತಿಸಿ, ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಶ್ಮಿತಾ ಸುರೇಶ್ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ನಿಯೋಜಿತ ಅಧ್ಯಕ್ಷ ಸುರೇಶ್ ಪಿ ವಂದಿಸಿದರು.

ಕವಿಗೋಷ್ಠಿ ನಿರ್ವಹಣೆಯನ್ನು ಸೌಮ್ಯರಾಮ್ ಕಲ್ಲಡ್ಕ ಹಾಗೂ ಸೌಜನ್ಯ ಬಿ. ಎಂ. ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top