ಪುತ್ತೂರು: ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡಮತದಾನ ಮಾಡಿರುವ ಕುರಿತು ವರದಿಯಾಗಿದೆ.
ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್‍ಗೆ ಅಡ್ಡಮತದಾನ ಮಾಡಿದ್ದಾರೆ ಎಂದು ಬಿಜೆಪಿ ಚುನಾವಣಾ ಏಜೆಂಟ್ ಒಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.
ಮತದಾನಕ್ಕೂ ಮೊದಲು ಸೋಮಶೇಖರ್ ಪತ್ರಕರ್ತರೊಂದಿಗೆ ಮಾತನಾಡಿ, 11 ವರ್ಷದಿಂದ ಎಲ್ಲರಿಗೂ ಮತ ಹಾಕಿದ್ದೇನೆ. ಆದರೆ ರಾಜ್ಯಸಭೆಗೆ ಆಯ್ಕೆಯಾದವರು ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ಈ ನಿಟ್ಟಿನಲ್ಲಿ ನಾನು ಈ ಬಾರಿ ಆತ್ಮಸಾಕ್ಷಿಯಾಗಿ ಮತ ಹಾಕುತ್ತೇನೆ ಎಂದು ತಿಳಿಸಿದರು.
ಕಳೆದ ಬಾರಿ ನಿರ್ಮಲಾ ಸೀತಾರಾಮನ್ ಅವರಿಗೆ ಮತ ಹಾಕಿದ್ದೆ. ಆಮೇಲೆ ಅವರು ನನಗೆ ಭೇಟಿ ನೀಡಲು ಅಪಾಯಿಂಟ್ ಮೆಂಟ್ ಕೂಡಾ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
























