ಪುತ್ತೂರು: 5ನೇ ವರ್ಷದ ಮೆಸ್ಕಾಂ ಪವರ್ ಟ್ರೋಫಿ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾಟ ಇಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ
ಪುತ್ತೂರು ನಗರ ಉಪವಿಭಾಗದ ಸಾರಥ್ಯದಲ್ಲಿ ಪುತ್ತೂರು, ಸುಳ್ಯ, ಕಡಬ, ನೆಲ್ಯಾಡಿ ಮತ್ತು ಸಬ್ರಮಣ್ಯ ಮೆಸ್ಕಾಂ ಉಪವಿಭಾಗಗಳಿಂದ ಸುಮಾರು 12 ತಂಡಗಳು ಆಡಲಿವೆ ಪ್ರತಿ ದಿನ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಒಂದು ದಿನದ ಪಂದ್ಯಾಟವನ್ನು ಪ್ರತಿ ವರ್ಷ ಪುತ್ತೂರು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ. ಇವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಆಯೋಜಿಸಲಾಗುತ್ತಿದೆ.
ಮೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಪಂದ್ಯಾಟ ಉದ್ಘಾಟಿಸಲಿದ್ದಾರೆ.