ವಿಟ್ಲ: ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತೀ ವಂದನಾ ಕಾರ್ಯಕ್ರಮ ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಜೀವಿನಿ ತಾಲೂಕು ನಿರ್ವಹಣಾ ಘಟಕ ಮೇಲ್ವಿಚಾರಕಿ ದೀಕ್ಷಿತಾ, ಎಂ.ಬಿ.ಕೆ ಸೌಮ್ಯ ಹಾಗೂ ಧರ್ಮಸ್ಥಳ ಗ್ರಾಮ ಅಭಿವೃದ್ದಿ ಸೇವಾ ಪ್ರತಿನಿಧಿ ಯಶೋಧ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪುನೀತ್ ಮಾಡತ್ತಾರ್ ಅಧ್ಯಕ್ಷತೆ ವಹಿಸಿದ್ದರು, ಪುತ್ತೂರು ಮಂಡಲ ಶಕ್ತೀವಂದನಾ ಪ್ರಮುಖ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹರಿಪ್ರಸಾದ್ ಯಾದವ್, ಗ್ರಾಪಂ.ಉಪಾಧ್ಯಕ್ಷೆ ರೋಹಿಣಿ, ಸೊಸೈಟಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ಗ್ರಾಪಂ.ಸದಸ್ಯರಾದ ಜಯಪ್ರಕಾಶ್ ನಾಯಕ್, ಉಮೇಶ್ ಅರ್ಕಲ್ ತೋಟ, ಅಭಿವೃದ್ಧಿ ಅಧಿಕಾರಿ ಸುಜಯ, ಸೊಸೈಟಿ ನಿರ್ದೇಶಕ ದಯಾನಂದ ಶೆಟ್ಟಿ, ಶಕ್ತೀ ಕೇಂದ್ರ ಪ್ರಮುಖ್ ಗೋವಿಂದರಾಜ್ ಭಟ್ ಮೊದಲಾದವರು ಉಪಸ್ಥಿತರಿದ್ದರು.