ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸೇವಾ ಚಟುವಟಿಕೆಯ ಅಂಗವಾಗಿ ಟ್ರಸ್ಟ್  ಮತ್ತು ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಜೊತೆಯಾಗಿ ಹೃದಯದ ಸಮಸ್ಯೆಯಿಂದ ಬಳಲುತಿರುವ ಕೊರಗಪ್ಪ ನಾಯ್ಕ ಬರೆಕೋಲಾಡಿ ಅವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಸುಮಾರು 25,750 ರೂ. ಸಹಾಯಧನ ನೀಡಲಾಯಿತು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಚೆಕ್ ಮೂಲಕ ಧನಸಹಾಯ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಮುಂಡೂರು ಗ್ರಾಮ ಪಂಚಾಯತ್ ಸದಸ್ಯ  ಅಶೋಕ್ ಕುಮಾರ್ ಪುತ್ತಿಲ, ಮುಂಡೂರು ಹಾಲು ಉತ್ಪದಕ ಸಹಕಾರ ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನುಜಿ, ಶ್ರೀ ರಾಮ ಗೆಳೆಯರ ಬಳಗದ, ಪುತ್ತಿಲ ಪರಿವಾರದ ಗೌರವ ಸಲಹೆಗಾರ ಸುಂದರ ಬಿಕೆ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪ್ರಸಾದ್ ಬಿಕೆ, ಹರೀಶ ಬಿಕೆ, ಯೋಗೀಶ ಕಲ್ಲಮ, ಜಗದೀಶ್ ಕಲ್ಲಮ, ಧನಂಜಯ ಕಲ್ಲಮ ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top