ವಿಟ್ಲ: ಕೂಲಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ಇಂದು ನಡೆದಿದೆ.
ಕೂಲಿ ಕಾರ್ಮಿಕ ಜಾರಪ್ಪ ನಾಯ್ಕ(60) ಆತ್ಮಹತ್ಯೆ ಮಾಡಿಕೊಂಡವರು.
ಜಾರಪ್ಪ ನಾಯ್ಕ ಅವರು ಎಂದಿನಂತೆ ಸ್ಥಳೀಯರೊಬ್ಬರ ಮನೆಯ ತೋಟದ ಕೆಲಸಕ್ಕೆ ತೆರಳಿದ್ದರು. ಆದರೆ ಕೆಲಸಕ್ಕೆ ಎಷ್ಟು ಹೊತ್ತಾದರೂ ಬಾರದ ಹಿನ್ನಲೆಯಲ್ಲಿ ಮನೆಯವರಲ್ಲಿ ವಿಚಾರಿಸಿದ್ದರು. ಬಳಿಕ ಹುಡುಕಾಡಿದಾಗ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.
ವಿಟ್ಲ ಪೋಲೀಸರು ಸ್ಥಳಕ್ಕೆ ಆಗಮಿಸಿ ಮೃತ ಶರೀರವನ್ನು ಕೆಳಕ್ಕಿಳಿಸಿದರು. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.