ಮೂವರು ಅನಾಥ ಸಹೋದರಿಯರು ಸಾಮೂಹಿಕ ಆತ್ಮಹತ್ಯೆ

9 ದಿನಗಳ ಬಳಿಕ ಹೊರ ಜಗತ್ತಿಗೆ ತಿಳಿಯಿತು ದಾರುಣ ಘಟನೆ

ತುಮಕೂರು: ಅನಾಥರಾಗಿದ್ದ ಮೂವರು ಸಹೋದರಿಯರು ಮನೆಯಲ್ಲಿ ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದಿದೆ.

9 ದಿನಗಳ ಹಿಂದೆಯೇ ಈ ದಾರುಣ ಘಟನೆ ನಡೆದಿದ್ದು, ಕೊಳೆತ ವಾಸನೆ ಬಂದ ಬಳಿಕ ಸ್ಥಳೀಯರು ಗಮನಿಸಿದಾಗ ಗುರುವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಸಹೋದರಿಯರನ್ನು ಬರಕನಹಾಲ್ ತಾಂಡ್ಯದ ರಂಜಿತಾ(24), ಚಂದನಾ(21 ) ಮತ್ತು ಬಿಂದು(18) ಎಂದು ಗುರುತಿಸಲಾಗಿದೆ.
10 ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಈ ಸಹೋದರಿಯರು ಅಜ್ಜಿ ಜತೆಯಲ್ಲಿ ವಾಸವಿದ್ದರು. ಆಸರೆಯಾಗಿದ್ದ ಅಜ್ಜಿಯೂ ಇತ್ತೀಚೆಗೆ ತೀರಿಕೊಂಡಿದ್ದರು. ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.



































 
 

ಈ ಮೂವರು ಸಹೋದರಿಯರ ಪೈಕಿ ಇಬ್ಬರು ಕಿಬ್ಬನಹಳ್ಳಿಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಹೋದರಿಯರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಎಎಸ್​ಪಿ ಸಿದ್ದಾರ್ಥ್ ಗೋಯೆಲ್, ಸಿಪಿಐ ನಿರ್ಮಲಾ, ಪಿಎಸ್​ಐ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top