ಪುತ್ತೂರು: ನೆಹರುನಗರದ ಹೊಟೇಲ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾತ ಬೆಲೆಬಾಳುವ ಮೊಬೈಲ್ ನೊಂದಿಗೆ ಪರಾರಿಯಾದ ಘಟನೆ ಇಂದು ನಡೆದಿದೆ.
ಸಪ್ಲೈಯರ್ ಗಣೇಶ್ ಎಂಬಾತ 69 ಸಾವಿರ ರೂ. ಮೌಲ್ಯದ ಮೊಬೈಲ್ ನೊಂದಿಗೆ ಪರಾರಿಯಾದಾತ.
ಈತ ನೆಹರೂನಗರದ ಕೋಕೋಗುರು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ ಈತ ತಾನು ಕ್ಯಾಶ್ ಕೌಂಟರ್ ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶಿಯರನ್ನು ಊಟಕ್ಕೆ ಕಳುಹಿಸಿದ್ದಾನೆ. ಕ್ಯಾಶಿಯರ್ ಊಟಕ್ಕೆ ತೆರಳುತ್ತಿದ್ದಂತೆ ಡ್ರವರ್ ನಲ್ಲಿದ್ದ ಬೆಲೆಬಾಳುವ ಮೊಬೈಲ್ ನೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಪ್ಲೈಯರ್ ನ ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತ ಇನ್ನಷ್ಟೇ ತಿಳಿದು ಬರಬೇಕಿದೆ.