ಪುತ್ತೂರು : ಪಡೀಲು ವಿಜಯನಗರ ಬಡಾವಣೆಯಲ್ಲಿ ನಾರಾಯಣ ನಾಯ್ಕ್ ಮತ್ತು ಶಿವಪ್ರಸಾದ್ ನಾಯ್ಕ್ ಎಂಬವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟವಾಗಿದ್ದು, ಪುತ್ತಿಲ ಪರಿವಾರದಿಂದ ಧನಸಹಾಯ ನೀಡಲಾಯಿತು.
ಅವಘಡ ಸಂಭವಿಸಿದ ತಕ್ಷಣ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ತಂಡ ಭೇಟಿ ನೀಡಿ ಸಾಂತ್ವನ ಹೇಳಿ, ಕೈಲಾದ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ, ಚಂದ್ರಹಾಸ ಶೆಟ್ಟಿ ಆನೆಮಜಲು, ಸತೀಶ್ ಭಂಡಾರಿ, ಪ್ರವೀಣ್ ಭಂಡಾರಿ, ಮನೀಶ್ ಕುಲಾಲ್, ಶರತ್ ರೈ ಸ್ಥಳೀಯರಾದ ಚಂದ್ರಹಾಸ್ ಶೆಟ್ಟಿ ಜೊತೆಗಿದ್ದರು.