ಪಂಜ: ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಫೆ1 ರಿಂದ ಮಾ.8ರ ವರೆಗೆ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ .
ಜಾತ್ರೋತ್ಸವದ ಅಂಗವಾಗಿ ಫೆ.5 ರಂದು ಬೆಳಿಗ್ಗೆ10.30 ಕ್ಕೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ರಾತ್ರಿ ಕಾಚುಕುಜುಂಬೋತ್ಸವ, ಶ್ರೀ ಶೀರಾಡಿ ರುದ್ರಚಾಮುಂಡಿ ಮತ್ತು ಕಾಚುಕುಜುಂಬ ದೈವಗಳ ನರ್ತನ ಸೇವೆ, ಸರ್ವಸೇವೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ.
ಫೆ.6 ರಂದು ರಾತ್ರಿ 9.30 ರಿಂದ ವೈಭವದ ಬ್ರಹ್ಮ ರಥೋತ್ಸವ ನಡೆದು ಕಾಚುಕುಜುಂಬ ದೈವದ ನರ್ತನ ಸೇವೆ ಭೂತ ಬಲಿ, ಶಯನೋತ್ಸವ, ಕವಾಟಬಂದನ, ಅನ್ನಸಂತರ್ಪಣೆ ನಡೆಯಲಿದೆ.
ಫೆ.7 ರಂದು ಬೆಳಿಗ್ಗೆ 6ಕ್ಕೆ ಗಂಟೆಗೆ ಬಲಿ ಹೊರಟು, ಅವಬೃತ ಸ್ನಾನ, ದ್ವಜಾವಾರೋಹಣ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 4ಕ್ಕೆ ದೇಗುಲದಿಂದ ಶ್ರೀ ಕಾಚುಕುಜುಂಬ ಉಳ್ಳಾಕುಲು ದೈವಗಳ ಭಂಡಾರ ತೆಗೆದು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿಬೈಲಿಗೆ ಹೋಗಿ ದ್ವಜಾರೋಹಣ , ಶ್ರೀ ಕಾಚುಕುಜುಂಬ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಫೆ.8 ರಂದು ಬೆಳಿಗ್ಗೆ ಗಂಟೆ 6.30 ಕ್ಕೆ ಗರಡಿಬೈಲಿನ ಮೂಲ ನಾಗನಕಟ್ಟೆಯಲ್ಲಿ ತಂಬಿಲ ಹಾಗೂ ಬೆಳಿಗ್ಗೆ 7.30 ರಿಂದ ಶ್ರೀ ಉಳ್ಳಾಕುಲು ದೈವದ ನೇಮ, ಪ್ರಸಾದ ವಿತರಣೆ, ದ್ವಜಾವರೋಹಣ, ಶ್ರೀ ದೇಗುಲದಲ್ಲಿ ಸಂಪ್ರೋಕ್ಷಣೆ, ಮಹಾಪೂಜೆ, ವೈಧಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ಶಿರಾಡಿ ದೈವದ ಭಂಡಾರ ಬರುವುದು.
ಫೆ.9 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.
























