ಸರಕಾರಿ ಪ್ರೇರಿತವಾಗಿ ಹನುಮಧ್ವಜ ಇಳಿಸಿದ್ದು ಖಂಡನೀಯ : ಬಜರಂಗದಳ

ಪುತ್ತೂರು: ಶ್ರೀರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಕರೆಗೋಡು ಹೋಬಳಿಯಲ್ಲಿ ಎಲ್ಲಾ ಜನರ ಪರವಾಗಿ ಹಾರಿಸಿದ ಹನುಮಧ್ವಜವನ್ನು ಸರಕಾರಿ ಪ್ರೇರಿತವಾಗಿ ಇಳಿಸಿದ ಘಟನೆ ಖಂಡನೀಯ ಎಂದು ಬಜರಂಗದಳ ಪ್ರಾಂತ ಸಂಯೋಜಕರಾದ ಸುನೀಲ್‍ ಕೆ.ಆರ್., ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.

ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಸಾವಿರಾರು ಜನರ, ತಾಯಂದಿರ ಪ್ರತಿಭಟನೆಯ ನಡುವೆಯೂ ಸರಕಾರಿ ಪ್ರೇರಿತವಾಗಿ ಇಳಿಸಿದಂತಹ ಘಟನೆ ಅತ್ಯಂತ ದುರದೃಷ್ಟಕರ. ಹಿಂದೂ ಸಮಾಜದ ಭಾವನೆಗಳಿಗೆ, ನಂಬಿಕೆಗಳಿಗೆ ಯಾವುದೇ ಬೆಲೆಕೊಡದ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು ತಿಳಿಸಿದ್ದಾರೆ.

ಈ ನಿಟ್ಟಿನ;ಲ್ಲಿ ಸೋಮವಾರ ಮಂಡ್ಯದ ಕರೆಗೋಡು ಹೋಬಳಿಯಲ್ಲಿ ಮನೆಗಳಲ್ಲಿ ಭಗವಾಧ್ವಜವನ್ನು ಜಾತಿ, ಪಕ್ಷ ಮರೆತು ಹಾರಿಸಿ ಹಿಂದೂ ವಿರೋಧಿ ಸರಕಾರಕ್ಕೆ ಸರಿಯಾದ ಉತ್ತರವನ್ನು ನೀಡಬೇಕೆಂದು ಅವರು ವಿನಂತಿಸಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top