ಕಾಣಿಯೂರು: ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಪೂರ್ವಭಾವಿ ಸಭೆ ಜ. 27ರಂದು ದೈವಸ್ಥಾನದ ಆವರಣದಲ್ಲಿ ನಡೆಯಿತು.
ಮಾ. 9ರಂದು ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 9ಕ್ಕೆ ಕಟ್ಟತ್ತಾರು ಕಟ್ಟೆಯಲ್ಲಿ ಗಣಹೋಮ ನಡೆದು, ಸಂಜೆ ಅನ್ಯಾಡಿ ಗ್ರಾಮ ಚಾವಡಿಯಿಂದ ಭಂಡಾರ ಹೊರಟು ಕಟ್ಟತ್ತಾರು ಕಟ್ಟೆಯಲ್ಲಿ ನೇಮೋತ್ಸವ ನಡೆಯಲಿದೆ. ಇದೇ ಸಂದರ್ಭ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ವಾರ್ಷಿಕ ನೇಮೋತ್ಸವದ ಅಂಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಪೂರ್ವತಯಾರಿ ನಡೆಯುತ್ತಿದ್ದು, ಯಶಸ್ಸಿಗಾಗಿ ಎಲ್ಲರ ಸಹಕಾರ ಬೇಕೆಂದು ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಮನವಿ ಮಾಡಿದರು.
ಸಭೆಯಲ್ಲಿ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಆಡಳಿತ ಸಮಿತಿ ಉಪಾಧ್ಯಕ್ಷ ಎ. ಆನಂದ ಅನ್ಯಾಡಿ, ದೇವಪ್ಪ ಗೌಡ ನಡುಮನೆ, ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ಅನ್ಯಾಡಿ ಬಾರಿಕೆ ಕುಟುಂಬದ ಹಿರಿಯರಾದ ಪದ್ಮಯ್ಯ ಗೌಡ, ಮೋನಪ್ಪ ಗೌಡ ಅನ್ಯಾಡಿ, ಆಡಳಿತ ಸಮಿತಿ ಸದಸ್ಯರಾದ ಯೋಗೀಶ್ ಕೆಡೆಂಜಿ, ನಿವೃತ್ತ ಶಿಕ್ಷಕಿ ರೇವತಿ ವಾಲ್ತಾಜೆ, ಪೂವಣ್ಣಿ ಗೌಡ ಅನ್ಯಾಡಿ, ನಾರ್ಣಪ್ಪ ಗೌಡ ಅನ್ಯಾಡಿ, ಸೋಮಪ್ಪ ಗೌಡ ಅನ್ಯಾಡಿ, ಯತೀಶ್ ನಡುಮನೆ, ಸುಬ್ರಾಯ ಗೌಡ ಕೆರೆನಾರು, ಜನಾರ್ದನ ಗೌಡ ಕೂರ, ಚೆನ್ನಪ್ಪ ಗೌಡ ಅನ್ಯಾಡಿ, ಜಯರಾಮ ಅನ್ಯಾಡಿ, ದೇವಣ್ಣ ಗೌಡ ಅನ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.