ಕಾಣಿಯೂರು: ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಶ್ರೀಮಾ ಕೆ.ಎಚ್. ಹಾಗೂ ಮೋನಿಶ್ ಅವರು ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಫೆ. 1ರಿಂದ 4ರವರೆಗೆ ಯೋಗಾಸನ ಸ್ಪರ್ಧೆ ನಡೆಯಲಿದೆ. ಕರ್ನಾಟಕ ತಂಡದಿಂದ ಒಟ್ಟು 14 ಮಂದಿ ಸ್ಪರ್ಧಿಸುತ್ತಿದ್ದು, ಇದರಲ್ಲಿ ಕಾಣಿಯೂರು ಪ್ರಗತಿ ಶಾಲೆಯ ಶ್ರೀಮಾ ಕೆ.ಎಚ್. ಹಾಗೂ ಮೋನಿಶ್ ಇಬ್ಬರು.
ಇವರಿಗೆ ಪ್ರಗತಿ ವಿದ್ಯಾಸಂಸ್ಥೆ ಯೋಗಗುರು ಶಶಿಕಲಾ ಹಾಗೂ ಸಂತೋಷ್ ಮುಂಡಕಜೆ ಸುಳ್ಯ ಅವರು ತರಬೇತಿ ನೀಡಿದ್ದಾರೆ.
ಶ್ರೀಮಾ ಕೆ.ಎಚ್. ಅವರು ಕುಶಾಲಪ್ಪ ಗೌಡ ಹುದೇರಿ ಹಾಗೂ ಸುಜಿತಾ ದಂಪತಿ ಪುತ್ರಿ. ಮೋನಿಶ್ ಅವರು ವಿಶ್ವನಾಥ ಗೌಡ ಹಾಗೂ ದಯಾಮಣಿ ಕಳಂಜ ತಂಟೆಪ್ಪಾಡಿ ದಂಪತಿ ಪುತ್ರ.