ಟೀ ಅಂಗಡಿಯಲ್ಲಿ ಕುಳಿತು ಕೇರಳ ರಾಜ್ಯಪಾಲರ ಪ್ರತಿಭಟನೆ!

ರಾಜ್ಯದ ಪ್ರಥಮ ಪ್ರಜೆ ಎಂದೇ ಕರೆಸಿಕೊಳ‍್ಳುವ ರಾಜ್ಯಪಾಲರೇ ಪ್ರತಿಭಟನೆಗೆ ಕುಳಿತರೆ ಹೇಗೆ?

ಇಂತಹದ್ದೊಂದು ವಿಚಿತ್ರ ಘಟನೆ ಕೇರಳದಲ್ಲಿ ಶನಿವಾರ ನಡೆದಿದೆ.

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಸಂದರ್ಭ, ಎಸ್.ಎಫ್.ಐ. ಪ್ರತಿಭಟನೆ ನಡೆಸಿತು. ಇದರಿಂದ ಖೇದಗೊಂಡ ರಾಜ್ಯಪಾಲರು, ಅಲ್ಲೇ ಇದ್ದ ಟೀ ಅಂಗಡಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.



































 
 

ಮಾತ್ರವಲ್ಲ, ಆಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ, ವಿಚಾರವನ್ನು ತಿಳಿಸಿದರು. ತಾನು ರಾಜ್ಯಪಾಲರಾಗಿದ್ದರೂ ತನಗೆ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top