ಪುತ್ತೂರು: ಹಿಂದೂ ಸಂಘಟನೆಯ ಅಮಾಯಕ ಕಾರ್ಯಕರ್ತರಿಗೆ ಉಪವಿಭಾಗೀಯ ದಂಢಾಧಿಕಾರಿಗಳು ಗಡಿಪಾರಿಗೆ ನೋಟಿಸ್ ನೀಡಿರುವುದನ್ನು ಪುನರ್ ಪರಿಶೀಲಿಸಿ ಹಿಂಪಡೆಯ ಬೇಕೆಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಅಗ್ರಹಿಸಿದ್ದಾರೆ…
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಯೋoಜಕ ದಿನೇಶ್ ಪಂಜಿಗ ಹಾಗೂ ಹಿಂಜಾವೇ ಮುಖಂಡ ಅವಿನಾಶ್ ರವರ ಮೇಲೆ ವಿನಾಕಾರಣ ಯಾವುದೇ ಗಂಭೀರವಾದ ಅಪರಾಧ ಇಲ್ಲದಿದ್ದರೂ ಸರಕಾರ ಹಿಂದೂ ಕಾರ್ಯಕರ್ತನನ್ನು ಧಮನಿಸುವ ಷಡ್ಯಂತ್ರಕ್ಕೆ ಕೈ ಹಾಕಿರುವುದು ಹಿಂದೂ ವಿರೋಧಿ ನೀತಿಯಾಗಿದೆ ಎಂದು ಹೇಳಿದರು.
ಈ ರೀತಿ ಸರಕಾರ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಗಡಿಪಾರು ನೋಟಿಸು ನೀಡಿದರೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಮತ್ತು ಇಲಾಖೆಯ ಎದುರು ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
























