ಪುತ್ತೂರು: ಪುತ್ತೂರಿನ ಅತ್ಯಂತ ಹಿರಿಯ ಅಯೋಧ್ಯಾ ಕರಸೇವಕರಾದ ನಟ್ಟೋಜ ಶಿವಾನಂದ ರಾವ್ ಅವರನ್ನು ಪುತ್ತಿಲ ಪರಿವಾರದಿಂದ ಸನ್ಮಾನಿಸಲಾಯಿತು.
ನಟ್ಟೋಝ ಶಿವಾನಂದ ರಾವ್ ಅವರು ಪುತ್ತೂರಿನ ಹಳ್ಳಿ ಹಳ್ಳಿ ತಿರುಗಿ ರಾಮ ಜನ್ಮ ಭೂಮಿಯ ಜಾಗೃತಿ ಮೂಡಿಸಿರುವುದರ ಜತೆಗೆ ಶ್ರೀರಾಮ ಶಿಲಾಪೂಜನ ಸಮಿತಿ ಪುತ್ತೂರು ಪ್ರಖಂಡದ ಮಾಜಿ ಅಧ್ಯಕ್ಷರು, ಪುತ್ತೂರು ನಗರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರೂ ಆಗಿದ್ದರು. ಅಯೋಧ್ಯೆ
ಈ ಸಂದರ್ಭ ಅವರ ಪುತ್ರ, ಪುತ್ತೂರು ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಕಾರ್ಯದರ್ಶಿ ಉಮೇಶ್ ವೀರಮಂಗಲ, ರೂಪೇಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.