ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಆಗುತ್ತಿದ್ದಂತೆ ಪುತ್ತಿಲ ಪರಿವಾರ ಕಚೇರಿಯಲ್ಲಿ ಪ್ರಭು ಶ್ರೀರಾಮದೇವರಿಗೆ ಪುಷ್ಪಾರ್ಚನೆ ನೆರವೇರಿಸಿ ಪ್ರಾರ್ಥನೆ ನೆರವೇರಿತು.
ಹಿಂದೂಗಳು ಶತಶತಮಾನಗಳಿಂದ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ ಪ್ರಭು ಶ್ರೀರಾಮಮಂದಿರ ಶುಭಮುಹೂರ್ತದಲ್ಲಿ ಲೋಕಾರ್ಪಣೆಗೊಂಡು ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯೂ ನೆರವೇರಿತು.
ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ, ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷ ಅನಿಲ್ ತೆಂಕಿಲ ಪ್ರಮುಖರಾದ ರವಿ ರೈ ಕೆದಂಬಾಡಿ ಮಠ, ಭೀಮಯ್ಯ ಭಟ್ ಸಂಪ್ಯ, ಪ್ರವೀಣ್ ಭಂಡಾರಿ, ರಾಜ್ ಶೆಟ್ಟಿ , ಶ್ರೀಕಾಂತ್ ಆಚಾರ್ಯ ಹಿಂದಾರು, ಪ್ರಜ್ವಲ್ ಘಾಟೆ, ಅಜಿತ್ ಬಲ್ನಾಡು, ರೂಪೇಶ್ , ಮನೀಶ್ ಕುಲಾಲ್ ಬನ್ನೂರು, ವಿಜಿತ್ ಉಪ್ಪಿನಂಗಡಿ, ಚರಣ್ ಕೀಲೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.