ಪುತ್ತೂರು: ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ನಡೆಯಿತು.
ಕ್ರೀಡಾಕೂಟ ಫೆ.4 ರಂದು ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಶಾಂತಿಗೋಡಿನ ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಸಂಘದ ಮುಖಂಡರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಮುಂಡೂರು ವಲಯದ ಅಧ್ಯಕ್ಷ ಚೆನ್ನಪ್ಪ ಗೌಡ ಕೋಲಾಡಿ, ಪ್ರಧಾನ ಕಾರ್ಯದರ್ಶಿ ವರುಣ್ ಗೌಡ ಓಲಾಡಿ, ಸಂಘಟನಾ ಕಾರ್ಯದರ್ಶಿ ಮೋಹನ್ ಗೌಡ ನಡುಬೈಲು, ಸಾಂಸ್ಕೃತಿಕ ಕಾರ್ಯದರ್ಶಿ ಶಿವಪ್ರಸಾದ್ ಕೈಂದಾಡಿ, ಶಾಂತಿಗೋಡು ಘಟಕದ ಪ್ರಧಾನ ಕಾರ್ಯದರ್ಶಿ ವಿನೋದ್ ಓಲಾಡಿ, ಗೌರವ ಸಲಹೆಗಾರ ಜಗದೀಶ್ ಗೌಡ ಪಾದೆ, ಶಾಂತಿಗೋಡು ಊರ ಗೌಡ್ರು ದೇವಪ್ಪ ಗೌಡ ಓಲಾಡಿ, ಆನಂದ ಗೌಡ ಬೊಲ್ಲಮೆ, ನರಿಮೊಗರು ಘಟಕದ ಕುಶಾಲಪ್ಪ ಗೌಡ ಪುರುಷರಕಟ್ಟೆ ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.
























