ಕೆಟ್ಟು ಹೋದ ಆಹಾರ ಸೇವನೆ ಶಂಕೆ
ಶಿವಮೊಗ್ಗ: ಇಲ್ಲಿನ ಗೋಂದಿಚಟ್ನ ಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು ಎಂಬತ್ತು ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳು ಅಸ್ವಸ್ಥಗೊಳ್ಳಲು ಆಹಾರ ಕಾರಣವೇ ಅಥವಾ ನೀರು ಕಾರಣವೇ ಎನ್ನುವುದು ಸ್ಪಷ್ಟವಾಗಿಲ್ಲ. ಮಧ್ಯಾಹ್ನದ ಚಪಾತಿ, ಅನ್ನ ಸಾಂಬಾರು ಸೇವಿಸಿದ ಬಳಿಕ ಮಕ್ಕಳಲ್ಲಿ ವಾಂತಿ ಮತ್ತು ಬೇಧಿ ಆರಂಭವಾಗಿದೆ.ಸುಮಾರು 250ಕ್ಕೂ ಹೆಚ್ಚು ಮಕ್ಕಳಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಮಧ್ಯಾಹ್ನ ಚಪಾತಿ ಮತ್ತು ಅನ್ನ ಸಾಂಬಾರು ಊಟದ ಬಳಿಕ ವಿದ್ಯಾರ್ಥಿಗಳಲ್ಲಿ ವಾಂತಿ ಬೇಧಿ ಶುರುವಾಗಿದೆ. ಒಬ್ಬರ ಬಳಿಕ ಇನ್ನೊಬ್ಬರು ಅಸ್ವಸ್ಥರಾಗಿದ್ಧಾರೆ.