ಪುತ್ತೂರು: ಶಾಂತಿಗೋಡು ಗ್ರಾಮ ವಿಕಾಸ ಸಮಿತಿ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಶಾಂತಿಗೋಡು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಕೈಂದಾಡಿ, ಶಿರಾಡಿ ದೈವಸ್ಥಾನದ ವಠಾರದಿಂದ ಆರಂಭಿಸಿ ಶಾಂತಿಗೋಡು ರಸ್ತೆಯಲ್ಲಿದ್ದ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಿ ಗ್ರಾಮ ಪಂಚಾಯಿತಿಗೆ ನೀಡಲಾಯಿತು. ವಿವೇಕಾನಂದ ಕಾನೂನು ವಿದ್ಯಾಲಯದ ಸುಮಾರು 50 ವಿದ್ಯಾರ್ಥಿಗಳು ಸಹಿತ ಶಾಂತಿಗೋಡು ಗ್ರಾಮ ವಿಕಾಸ ಸಮಿಯವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೂಸಪ್ಪ ಗೌಡ ಕಲ್ಕಾರು ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸಿದರು. ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮುಕ್ತೇಸರ ಸುಬ್ರಹ್ಮಣ್ಯ ಭಟ್ ತೊಳ್ಪಾಡಿ, ಶ್ಯಾಮ್ ಭಟ್ ಕೈಂಡಾಡಿ, ಮೋಹನ್ ಗೌಡ ಪಾದೆ, ದೇವಪ್ಪ ಓಲಾಡಿ, ಸೀತಾರಾಮ ಓಲಾಡಿ, ಹೋನಪ್ಪ ಗೌಡ ಕೈಂಡಾಡಿ, ಆನಂದ ಗೌಡ ಬೊಲ್ಲಮೆ, ಉರವರು ಉಪಸ್ಥಿತರಿದ್ದರು.