ಎಸ್‍.ಎಸ್‍.ಎಲ್‍.ಸಿ., ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ | ಎಸ್‍.ಎಸ್‍.ಎಲ್‍.ಸಿ. ಯಲ್ಲಿ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ

ಮಂಗಳೂರು: ಎಸ್‍.ಎಸ್‍.ಎಲ್‍.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯ 2024 ರ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಎಸ್‍.ಎಸ್‍.ಎಲ್‍.ಸಿ. ಪರೀಕ್ಷೆ ಮಾ.25 ರಿಂದ ಏ.6 ರ ತನಕ ಹಾಗೂ ಪಿಯುಸಿ ಪರೀಕ್ಷೆ ಮಾ.1 ರಿಂದ 22 ರ ತನಕ ನಡೆಯಲಿದೆ.

ವೇಳಾಪಟ್ಟಿ ಈ ಕೆಳಗಿನಂತಿದೆ:

ಎಸ್‍.ಎಸ್‍.ಎಲ್‍.ಸಿ. ಪರೀಕ್ಷೆ ವೇಳಾಪಟ್ಟಿ ಮಾ.25 ಸೋಮವಾರ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ಎನ್‍.ಸಿ.ಆರ್‍.ಟಿ. ಮಾ.27 ರಂದು ಸಮಾಜ ವಿಜ್ಞಾನ, ಮಾ.30 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಏ.2 ರಂದು ಗಣಿತ, ಸಮಾಜಶಾಸ್ತ್ರ, ಏ.3 ರಂದು ಅರ್ಥಶಾಸ್ತ್ರ ಪರೀಕ್ಷೆ ನಡೆಯಲಿದೆ.



































 
 

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಮಾ.1 ರಂದು ಕನ್ನಡ, ಅರೆಬಿಕ್, ಮಾ.4 ರಂದು ಗಣಿತ, ಮಾ.5 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾ.6 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಅಟೋ ಮೊಬೈಲ್, ಮಾ.7 ರಂದು ಇತಿಹಾಸ ಹಾಗೂ ಭೌತಶಾಸ್ತ್ರ, ಮಾ.9 ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ, ಮಾ.11 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾ.13 ರಂದು ಇಂಗ್ಲೀಷ್, ಮಾ.15 ರಂದು ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ, ಮಾ.16 ರಂದು ಅರ್ಥಶಾಸ್ತ್ರ, ಮಾ.18 ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಮಾ.20 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆ, ಮಾ.22 ರಂದು ಹಿಂದಿ ಪರೀಕ್ಷೆ ನಡೆಯಲಿದೆ.

ಎಸ್‍.ಎಸ್‍.ಎಲ್‍.ಸಿ. ಗೆ ಸಂಬಂಧಿಸಿ ಈ ಹಿಂದೆ ಒಂದು ಬಾರಿ ಪರೀಕ್ಷೆ ಬರೆದು ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಬರೆಯಬೇಕಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳು ಪಾಸಾಗಲಿ ಅಥವಾ ಫೈಲಾಗಲಿ ಮೂರು ಬಾರಿ ಪರೀಕ್ಷೆ ಬರೆಯಬಹುದು. ಮೂರರಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಪರೀಕ್ಷೆಯನ್ನು ಮುಂದಿನ ಅನುಕೂಲಕ್ಕಾಗಿ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.

ಎಸ್‍.ಎಸ್‍.ಎಲ್‍.ಸಿ. ಪರೀಕ್ಷೆ ಮಾ.30 ರಿಂದ ಏ.15, ಮೇ 8 ರಂದು ಫಲಿತಾಂಶ, ಮೇ 23 ರಂದು ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ, 2 ಜೂ.12 ರಿಂದ 10 ರ ವರೆಗೆ ಪರೀಕ್ಷೆ. ಜೂನ್ 29 ಕ್ಕೆ ಫಲಿತಾಂಶ, ಜು. 10 ರಂದು ಮರುಮೌಲ್ಯಮಾಪನದ ಫಲಿತಾಂಶ, 3 ನೇ ಪರೀಕ್ಷೆ ಜೂ.29 ರಿಂದ ಆ.5 ರ ವರೆಗೆ ಪರೀಕ್ಷೆ, ಆ.19 ರಂದು ಫಲಿತಾಂಶ, ಆ.26 ರಂದು ಮರು ಮೌಲ್ಯಮಾಪನ ಫಲಿತಾಂಶ ಪ್ರಕಟವಾಗಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top