ಕ್ರಿಶ್ಚಿಯನ್ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟ್ | ಪ್ರಕರಣ ದಾಖಲು

ನೆಲ್ಯಾಡಿ: ಕಡಬ ತಾಲೂಕಿನ ಇಚ್ಚಂಪಾಡಿ ಗ್ರಾಮದ ಬರುಮಾರು ಎಂಬಲ್ಲಿ ಕ್ರಿಶ್ಚಿಯನ್ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೈಪನಡ್ಕಯ ಕೆ.ಪಿ ಜಾರ್ಜ್ ಎಂಬವರು ಈ ಪೋಸ್ಟ್ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆ.ಪಿ ಚಾರ್ಜ್ ಎಂಬವರು ಮೊಬೈಲ್‌ ನೋಡುತ್ತಿರುವ ಸಂದರ್ಭ ಕ್ರಿಶ್ಚಿಯನ್ ಬ್ರದರ್ಸ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸುನೀಶ್ ಟಿ.ಪಿ. ಎಂಬವರು ಹಾಕಿದ ಸ್ಕ್ರೀನ್ ಶಾಟ್ ನ್ನು ನೋಡಲಾಗಿ ಇಚ್ಲಂಪಾಡಿ ಗ್ರಾಮದ ಗ್ರಾಮದ ಒಡತಡ್ಕ ಮನೆ ಪುರುಷೋತ್ತಮ ಓ ದವಳಗಿರಿ ಎಂಬವರ ಪ್ರೊಫೈಲ್ ಹೆಸರಿನ ಸ್ಕ್ರೀನ್ ಶಾಟ್ ನಲ್ಲಿ ‘ಕಡಬ ತಾಲ್ಲೂಕು ಇಚ್ಲಂಪಾಡಿ ಕೆಲವು ಮಲಯಾಳಿ ಹಿಂದೂಗಳಿಗೆ ಏನೋ ತಲೆಕಟ್ಟಿದೆಯೋ ಸರಿಯಾಗಿ ದುಡಿಯದೇ. ಹಣಕ್ಕಾಗಿ ಪಾದ್ರಿಯಾ ತೀಕ ಮೂಸುತ್ತಿದ್ದಾರೆ’ ಎಂಬುದಾಗಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ನ್ನು ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಧರ್ಮ ಧರ್ಮಗಳ ನಡುವೆ ಸಾಮರಸ್ಯ ಕೆಡಿಸಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top