ಪುತ್ತೂರು: ಪಾಣಾಜೆ ಆರ್ಲಪದವು ಪೂಮಾಣಿ- ಕಿನ್ನಿಮಾಣಿ- ಪಿಲಿಭೂತ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಸಭೆ ಪಾಣಾಜೆ ಶ್ರೀ ರಣಮಂಗಳ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಶಾಸಕ ಅಶೋಕ್ ರೈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಭಕ್ತಾದಿಗಳ ಸಹಕಾರದಿಂದ ಜೀರ್ಣೋದ್ದಾರ ಕಾರ್ಯ ನಡೆಯಲಿದೆ. ಪಾಣಾಜೆ, ಬೆಟ್ಟಂಪಾಡಿ ಮತ್ತು ನಿಡ್ಪಳ್ಳಿ ಗ್ರಾಮಗಳು ನನ್ನ ಗ್ರಾಮಗಳು. ಶಾಸಕನಾಗುವ ಮೊದಲೇ ನಾನು ಈ ಮೂರುಗ್ರಾಮಗಳ ಗ್ರಾಮಸ್ಥರ ಜೊತೆ ಅತಿ ಹತ್ತಿರದ ಸಂಪರ್ಕ ಹೊಂದಿದ್ದೇನೆ. ಯಾವುದೇ ಲೋಪದೋಷಗಳಿಲ್ಲದೆ ಜೀರ್ಣೋದ್ದಾರ ಕಾರ್ಯ ನೆರವೇರಲಿದೆ. ದೈವಸ್ಥಾನದ ಎಲ್ಲಾ ಕಾರ್ಯಗಳಲ್ಲೂ ಪಕ್ಷ ಬೇಧವಿಲ್ಲದೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು. ತನ್ನ ವೈಯುಕ್ತಿಕ ನೆಲೆಯಲ್ಲಿ ರೂ.5 ಲಕ್ಷ ದೇಣಿಗೆಯನ್ನು ನೀಡುವುದಾಗಿ ಶಾಸಕರು ತಿಳಿಸಿದರು.
ಸುಬ್ರಹ್ಮಣ್ಯ ರಣಮಂಗಳ ದೇವಸ್ಥಾನದ ಅನುವಂಶಿಕ ಅಢಳಿತ ಮೊಕ್ತೇಸರ ಶ್ರೀ ಕೃಷ್ಣ ಬೊಳ್ಳಿಲ್ಲಾಯ ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ಜಗನ್ಮೋಹನ್ ರೈ ಸೂರಂಬೈಲು, ಪ್ರ.ಕಾರ್ಯದರ್ಶಿ ಡಾ. ಅಖಿಲೇಶ್, ಕಾರ್ಯದರ್ಶಿ ಶುಭಕರ್ ರೈ ಉಪಸ್ಥಿತರಿದ್ದರು. ಶ್ರೀಪ್ರಸಾದ್ ಪಾಣಾಜೆ ಸ್ವಾಗತಿಸಿ, ವಂದಿಸಿದರು.