ಸವಣೂರು: ಪ್ರತಿಷ್ಠಿತ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಚುನಾವಣೆ ಜ.13 ರಂದು ನಡೆಯಲಿದೆ.
12 ಸ್ಥಾನಗಳ ಪೈಕಿ ಈಗಾಗಲೇ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಪ್ರಕಾಶ್ ರೈ ಸಾರಕರೆ ಓರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 12 ಸ್ಥಾನಗಳಿಗೆ 23 ಸ್ಪರ್ಧಿಗಳು ಕಣದಲಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ಕಾಂಗ್ರೆಸ್ ಎಲ್ಲಾ ಸ್ಥಾನಗಳಿಗೆ ಸ್ಪರ್ಧೆ ಮಾಡುತ್ತಿದ್ದು, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ.
ಭಾನುವಾರ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕ್ರಿಯೆ ನಡೆದು ಘೋಷಿಸಲಾಯಿತು. ಚುನಾವಣಾಧಿಕಾರಿ ಶೋಭಾ ಎನ್.ಎಸ್. ಅವರು ಅಭ್ಯರ್ಥಿಗಳಿಗೆ ಚಿಹ್ನೆ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ಹಾಗೂ ಸಿಬ್ಬಂದಿಗಳು ಸಹಕರಿಸಿದರು
ಸಹಕಾರಿ ಭಾರತಿಯ ಸಾಮಾನ್ಯ ಸ್ಥಾನದಿಂದ ಅಶ್ವಿನ್ ಎಲ್. ಶೆಟ್ಟಿ ಸವಣೂರು, ಉದಯ ರೈ ಮಾದೋಡಿ, ಗಣೇಶ್ ನಿಡ್ವಣ್ಣಾಯ, ತಾರನಾಥ ಕಾಯರ್ಗ, ಶಿವಪ್ರಸಾದ್ ಯಂ.ಎನ್., ಮಹಿಳಾ ಸ್ಥಾನದಿಂದ ಜ್ಞಾನೇಶ್ವರಿ ಹಾಗೂ ಸೀತಾಲಕ್ಷ್ಮೀ, ಹಿಂದುಳಿದ ವರ್ಗ ಎ ಯಿಂದ ಚೇತನ್ ಕುಮಾರ್, ಹಿಂದುಳಿದ ವರ್ಗ ಬಿ ಯಿಂದ ಚೆನ್ನಪ್ಪ ಗೌಡ ನೂಜಿ, ಪರಿಶಿಷ್ಟ ಪಂಗಡದಿಂದ ಗಂಗಾಧರ ನಾಯ್ಕ ಪೆರಿಯಡ್ಕ ಮತ್ತು ಅನುಸೂಚಿತ ಜಾತಿಯಿಂದ ತಿಮ್ಮಪ್ಪ ಕಣದಲ್ಲಿದ್ದಾರೆ.
ಕಾಂಗ್ರೆಸ್ನಿಂದ ಸಾಮಾನ್ಯ ಸ್ಥಾನದಿಂದ ಪ್ರವೀಣ್ಕುಮಾರ್ ಕೆಡೆಂಜಿಗುತ್ತು, ವೆಂಕಟೇಶ್ ಭಟ್ ಕೊಯಕುಡೆ, ಬಾಲಕೃಷ್ಣ ನೂಜಿ, ವಿಠಲ ಗೌಡ ಅಗಳಿ, ಸುಲೈಮಾನ್, ಮಹಿಳಾ ಸ್ಥಾನದಿಂದ ಕುಸುಮ, ತೇಜಾಕ್ಷಿ, ಹಿಂದುಳಿದ ವರ್ಗ ಎ ಯಿಂದ ಸತೀಶ್ ಕುಮಾರ್ ಕೆಡೆಂಜಿ, ಹಿಂದುಳಿದ ವರ್ಗ ಬಿ ಯಿಂದ ಅವಿನಾಶ್ ಬೈತಡ್ಕ, ಪರಿಶಿಷ್ಟ ಪಂಗಡದಿಂದ ಗಂಗಾಧರ ನಾಯ್ಕ ಪರಣೆ, ಅನುಸೂಚಿತ ಜಾತಿಯಿಂದ ಕೇಶವ ಕಣದಲ್ಲಿದ್ದಾರೆ.
ಪಕ್ಷೇತರರಾಗಿ ಸಾಮಾನ್ಯ ಕ್ಷೇತ್ರದಿಂದ ಯತೀಂದ್ರ ಶೆಟ್ಟಿ ಕಣದಲ್ಲಿದ್ದಾರೆ.
ಜ.13 ರಂದು ಬೆಳಿಗ್ಗೆಯಿಂದ ಸಂಜೆ ತನಕ ಚುನಾವಣೆ ನಡೆದು ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಶೋಭಾ ತಿಳಿಸಿದ್ದಾರೆ.