ಬೆಳ್ಳಾರೆ : ಮಹಿಳೆಯೋರ್ವರ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ತಿಗೆ ನಿವಾಸಿ ಚಿತ್ರಪ್ರಭಾ ರೈ ನೀಡಿರುವ ದೂರಿನ ಮೇರೆಗೆ ಪ್ರದೀಪ್ ಶೆಟ್ಟಿ, ಭಾಸ್ಕರ ರೈ ಧರ್ಮಸ್ಥಳ, ರವೀಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸರಳ ರೈ, ಜಯಶ್ರೀ ಶೆಟ್ಟಿ, ಕನ್ಯಾಕುಮಾರಿ ರೈ, ಕಾವ್ಯ ರೈ, ಅಮಿತಾ ರೈ, ವಾರಿಜ ರೈ, ಯತೀಂದ್ರನಾಥ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿತ್ರಪ್ರಭಾ ರೈ ಎಂಬವರು ಶುಕ್ರವಾರ ಸಂಜೆ ಮನೆಗೆ ನಡೆದುಕೊಂಡು ಹೋಗುವ ಸಂದರ್ಭ ಆರೋಪಿಗಳಾದ ಪ್ರದೀಶ್ ಶೆಟ್ಟಿ, ಭಾಸ್ಕರ ರೈ ಧರ್ಮಸ್ಥಳ, ರವೀಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸರಳ ರೈ, ಜಯಶ್ರೀ ಶೆಟ್ಟಿ, ಕನ್ಯಾಕುಮಾರಿ ರೈ, ಕಾವ್ಯಾ ರೈ,ಅಮಿತಾ ರೈ, ವರಿಜಾ ರೈ, ಯತೀಂದ್ರನಾಥ ಶೆಟ್ಟಿ ಹಾಗೂ ಇತರ ಅಪರಿಚಿತ ಇಬ್ಬರು ಮಹಿಳೆಯರು ತಡೆದು ನಿಲ್ಲಿಸಿ, ರಾಕೇಶ್ ಶೆಟ್ಟಿ ಮತ್ತು ಪ್ರಶಾಂತ ಎಂಬವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ನೀಡಿದ ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಅವಾಚ್ಯವಾಗಿ ಬೈದು, ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.