ಕಾಳಿ ಪೋಸ್ಟರ್‌ ವಿವಾದ : ಎಫ್‌ಐಆರ್‌ ರದ್ದುಗೊಳಿಸಲು ನಿರ್ದೇಶಕಿ ಅರ್ಜಿ

ಕಾಳಿ ಮಾತೆಯನ್ನು ಅಸಭ್ಯವಾಗಿ ಚಿತ್ರಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ

ಹೊಸದಿಲ್ಲಿ : ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಕಾಳಿ ದೇವತೆ ಕೈಯಲ್ಲಿ ಸಿಗರೇಟ್ ಇರುವ ಪೋಸ್ಟರ್‌ ರಚಿಸಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಅನಿವಾಸಿ ಭಾರತೀಯ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮಣಿಮೇಕಲೈ ಸ್ವತಃ ಕಾಳಿ ದೇವಿಯ ವೇಷ ಧರಿಸಿ ಬಾವುಟ ಹಿಡಿದು ಸಿಗರೇಟ್ ಸೇದುತ್ತಿರುವ ಪೋಸ್ಟರ್‌ ವಿರುದ್ಧ ದಿಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಮಣಿಮೇಕಲೈ ಅವರ ಅರ್ಜಿಯನ್ನು ಜನವರಿ 20 ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಪೀಠ ಹೇಳಿದೆ.
ತಾವು ಒಬ್ಬ ಸೃಜನಶೀಲ ಚಲನಚಿತ್ರ ನಿರ್ದೇಶಕಿಯಾಗಿದ್ದು, ಯಾರೊಬ್ಬರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ಈ ಚಿತ್ರದ ಪೋಸ್ಟರ್ ಹೊಂದಿಲ್ಲ ಎಂದು ಮಣಿಮೇಕಲೈ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top