ವಿಮಾನ ಆಗಷ್ಟೇ ಭೂಮಿಯನ್ನು ಸ್ಪರ್ಶಿಸಿತ್ತು. ಅಷ್ಟರಲ್ಲೇ ಕಾಣಿಸಿಕೊಂಡಿತು ಬೆಂಕಿ. ವಿಮಾನದ ರೆಕ್ಕೆಯಲ್ಲಿ ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀಯ ವಿಮಾನವನ್ನು ಆಹುತಿ ತೆಗೆದುಕೊಂಡಿತು.
ಇದು ನಡೆದದ್ದು ಜಪಾನಿನ ನರೆಡಾ ವಿಮಾನ ನಿಲ್ದಾಣದಲ್ಲಿ. ವಿಮಾನದಲ್ಲಿ 379 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.
ಜಪಾನಿನ ಮಾಧ್ಯಮಗಳು ಪ್ರಸಾರ ಮಾಡಿರುವ ವೀಡಿಯೋದಲ್ಲಿ ಕಂಡುಬಂದಂತೆ, ರನ್ ವೇಯಲ್ಲಿ ಬೆಂಕಿಯುಂಡೆ ಉಗುಳತ್ತ ವಿಮಾನ ಚಲಿಸುತ್ತಿರುವುದು ಕಂಡುಬರುತ್ತಿದೆ. ಕಿಟಕಿ ಮೂಲಕ ದಟ್ಟ ಹೊಗೆ ಹೊರಹೋಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.