ಪುತ್ತೂರು: ಆರ್ಲಪದವು ನಿವಾಸಿ ಶಿವಪ್ಪ ನಾಯ್ಕ ಅವರ ಪುತ್ರ, ಮೇಸ್ತ್ರಿ ಗುತ್ತಿಗೆದಾರ ವಿಜಯ್ ಕುಮಾರ್ (38 ವ.) ನೇಣಿಗೆ ಶರಣಾಗಿದ್ದಾರೆ.
ಜನವರಿ 1ರ ಸಂಜೆ ಮನೆಯೊಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ.
ವಿಜಯ್ ಕುಮಾರ್ ಅವರಿಗೆ ವಿವಾಹ ನಡೆಸಲು ಮನೆಯವರು ಸಿದ್ಧತೆ ನಡೆಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
























