ಚಾರ್ವಾಕ : ಅಯೋಧ್ಯೆಯಿಂದ ತರಲಾದ ಪವಿತ್ರ ಮಂತ್ರಾಕ್ಷತೆಯನ್ನು ಚಾರ್ವಾಕ ಕಪಿಲೇಶ್ವರ ದೇವಸ್ಥಾನದಿಂದ ಕುಂಬ್ಲಾಡಿ ಬಾಲಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ತರಲಾಯಿತು.

ಜ.22 ರಂದು ಅಯೋಧ್ಯೇಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ಕಪಿಲೇಶ್ವರ ದೇವಸ್ಥಾನದಿಂದ ಅಯೋದ್ಯೆಯ ಮಂತ್ರಾಕ್ಸತೆ ಇಂದು ಬೆಳಿಗ್ಗೆ ಕುಂಬ್ಲಾಡಿ ಬಾಲಸುಬ್ರಮಣ್ಯ ದೇವಸ್ಥಾನಕ್ಕೆ ತಂದು ಬಳಿಕ ಅರ್ಚಕರು ಪವಿತ್ರ ಮಂತ್ರಾಕ್ಷತೆಗೆ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಕಪಿಲೇಶ್ವರ ದೇವಸ್ಥಾನದ ಅರ್ಚಕರಾದ ವೆಂಕಟಕೃಷ್ಣ ಭಟ್, ಕುಂಬ್ಲಾಡಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಚರ್ಕರಾದ ನೂತನ್ ಭಟ್, ಗಣಪತಿ ಭಟ್, ಸತೀಶ್ ಅಂಬುಲ, ದಾಮೋದರ ಅಂಬುಲ, ಕುಶಾಲಪ್ಪ ಅಂಬುಲ, ಜತಪ್ಪ ಉಲ್ಲಡ, ದಿಶಾಂತ್ ನಡುಬೈಲ್, ಮೋನಪ್ಪ ಉಳವ, ವಸಂತ ಬಾಕಿಲ, ರೋಹಿತ್ ಮಿಯೋಲ್ಪೆ, ದಿಲೀಪ್ ಅಂಬುಲ, ಗೋಪಾಲ ಗುಜರ್ಮೆ, ಗಣೇಶ್ ಉಡ್ಲಡ್ಡ,, ದಯಾನಂದ ಅಂಬುಲ, ಭಕ್ತಾಧಿಗಳು ಉಪಸ್ಥಿತರಿದ್ದರು.
























