ಪುತ್ತೂರು: ಪುತ್ತೂರು ಸಹಾಯಕ ಆಯುಕ್ತರಾಗಿ ಜುಬಿನ್ ಮಹಾಪಾತ್ರ ಬರಲಿದ್ದು, ಪ್ರಸ್ತುತ ಸಹಾಯಕ ಆಯುಕ್ತರಾಗಿರುವ ಗಿರೀಶ್ ನಂದನ್ ಅವರು ಮಂಗಳೂರು ಮಹಾನಗರ ಪಾಲಿಕೆಯ (ಕಂದಾಯ) ಉಪ ಆಯುಕ್ತರಾಗಿ ತೆರಳಲಿದ್ದಾರೆ.
ಪುತ್ತೂರು ಸೇರಿದಂತೆ ರಾಜ್ಯದ ಎಂಟು ಉಪವಿಭಾಗದ ಸಹಾಯಕ ಆಯುಕ್ತರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪ ಕಾರ್ಯದರ್ಶಿ ಆದೇಶ ಈ ಆದೇಶ ಹೊರಡಿಸಿದ್ದು, ಈ ಪೈಕಿ ಹೊಸದಾಗಿ ನೇಮಕಗೊಂಡ ಎಲ್ಲಾ ಎಂಟು ಸಹಾಯ ಆಯುಕ್ತರು 2021ನೇ ಬ್ಯಾಚ್‍ನ ಐಎಎಸ್ ಅಧಿಕಾರಿಗಳಾಗಿದ್ದಾರೆ.
























