ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಕೃಷ್ಭ ಭಟ್‍ ಕುಕ್ಕುಜೆ, ಉಪಾಧ್ಯಕ್ಷರಾಗಿ ಆಶಾ ರೈ ಕಲಾಯಿ

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರುಷಗಳ ಅವಧಿಗೆ ಅಧ್ಯಕ್ಷರಾಗಿ ಕೃಷ್ಣ ಭಟ್ ಕುಕ್ಕುಜೆ ಹಾಗೂ ಉಪಾಧ್ಯಕ್ಷರಾಗಿ ಆಶಾ ರೈ ಕಲಾಯಿ ಅವಿರೋಧವಾಗಿ ಆಯ್ಕೆಯಾದರು.

ಡಿ.26 ರಂದು ಸಂಘದ ಕಚೇರಿಯಲ್ಲಿ ಆಯ್ಕೆ ನಡೆಯಿತು. ಚುನಾವಣಾಧಿಕಾರಿ ಶೋಭಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು

ನಿರ್ದೇಶಕರುಗಳಾದ ಜಯರಾಮ ರೈ ಸೊಂಪಾಡಿ, ಪ್ರೇಮಚಂದ್ರ ಮೆದು, ಪ್ರಶಾಂತ್ ಕುಮಾರ್, ಮಮತಾ ಕೆ.ಬಿ ದೇವಸ್ಯ, ಗೋಪಾಲಕೃಷ್ಣ ಗೌಡ, ಪದ್ಮಯ್ಯ ಗೌಡ ಪರಣೆ, ಗಂಗಾಧರ ಸುಣ್ಣಾಜೆ, ಆಶಾಲತಾ, ಗೀತಾ, ಸೂರಪ್ಪ ಗೌಡರವರು ಉಪಸ್ಥಿತರಿದ್ದರು . ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹರೀಶ್ ಸಹಕರಿಸಿದರು. ನೂತನವಾಗಿ ಆಯ್ಕೆಗೊಂಡ ಅಧ್ಯಕ ಹಾಗೂ ಉಪಾಧ್ಯಕ್ಷೆ ಹಾಗೂ ನಿರ್ದೇಶಕರುಗಳು ಸಹಕಾರ ಭಾರತಿ ಬೆಂಬಲಿತರಾಗಿರುತ್ತಾರೆ. ನೂತನ ತಂಡಕ್ಕೆ ಬಿಜೆಪಿ ಮುಖಂಡರುಗಳಾದ ಗಿರಿಶಂಕರ ಸುಲಾಯ, ಸುಪ್ರೀತ್ ರೈ ಖಂಡಿಗ ಶುಭಹಾರೈಸಿದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top