ಪುತ್ತೂರು: ಮಾಣಿಲ ಗ್ರಾಮದ ಮುರುವ ಸರಕಾರಿ ಪ್ರೌಢ ಶಾಲೆಗೆ ತೆರಳುವ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ನಡೆಯಿತು.
ಶಾಸಕ ಅಶೋಕ್ ರೈ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಮಾಣಿಲ ಗ್ರಾಪಂ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ಮಾತನಾಡಿ, ಹಲವು ವರ್ಷಗಳ ಬೇಡಿಕೆ ಈ ಬಾರಿ ಈಡೇರಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕೆ ಈ ರಸ್ತೆ ಬಳಕೆಯಾಗಲಿದೆ ಎಂದು ಹೇಳಿದರು.
ಈ ವೇಳೆ ಶಾಲೆಯ ಸ್ಥಳ ದಾನಿ ಮುರುವ ಮಹಾಬಲೆಭಟ್ ,ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಶಿವಪ್ರಸಧ್ ಸರಂಪಳ್ಳ, ಜಗನ್ನಾಥ ಶೆಟ್ಟಿ, ಗ್ರಾಪಂ ಸದಸ್ಯ ವಿಷ್ಣು ಕೊಮ್ಮಂಜೆ , ಮಾಣಿಲ ಮಾಜಿ ಗ್ರಾಪಂ ಅಧ್ಯಕ್ಷೆ ವನಿತಾ, ಗ್ರಾಪಂ ಸದಸ್ಯೆ ಮಾಲತಿ, ಶಾಲಾ ಮುಖ್ಯಶಿಕ್ಷಕಿ ಲತಾ, ಜಯರಾಂ ಬಳ್ಳಾಲ್, ಶಿಕ್ಷಕರಾದ ಕವಿತಾ, ಉಮಾನಾಥ ರೈ, ಮಮತಾ, ಸುದೇಶ್, ಸೀತಾ ಲಕ್ಷ್ಮಿ,ಮೊಯಿದು ಕುಟ್ಟಿ,ಮೊದಲಾದವರು ಉಪಸ್ಥಿತರಿದ್ದರು.
























