ಉಪ್ಪಿನಂಗಡಿ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ನಡೆದಿದೆ.
ಪೆರ್ನೆ ಗ್ರಾಮದ ಶಿವರಾಮಕೋಡಿ ನಿವಾಸಿ ನಾರಾಯಣ ಮೂಲ್ಯ (63) ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ಎರಡು ವರ್ಷಗಳಿಂದ ನಾರಾಯಣ ಅವರ ದೇಹಾರೋಗ್ಯ ಹದಗೆಟ್ಟಿದ್ದು, ಮಾನಸಿಕವಾಗಿ ನೊಂದು ಮನೆಯಂಗಳದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪತ್ನಿ ಕೆ. ಸುಂದರಿ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.