ಪುತ್ತೂರು: ನಗರಸಭೆಯ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡೂ ಕಡೆಯೂ ಚುನಾವಣಾ ಆಯೋಗ ಬ್ಯಾಟ್ ಚಿಹ್ನೆಯನ್ನು ನೀಡಿದೆ.
ರಕ್ತೇಶ್ವರಿ ಘಟಕ ಕಬಕ ವಾರ್ಡ್ -1 ರಲ್ಲಿ ಅನ್ನಪೂರ್ಣ ರಾವ್ ಮತ್ತು ಚಿಕ್ಕಪುತ್ತೂರು ನೆಲ್ಲಿಕಟ್ಟೆ ವಾರ್ಡ್ ನಂ. 11 ರಲ್ಲಿ ಚಿಂತನ್.ಪಿ ಪುತ್ತಿಲ ಪರಿವಾರದ ವತಿಯಿಂದ ಪಕ್ಷೇತರ ಸ್ಪರ್ಧಿಸುತ್ತಿದ್ದು ಇಬ್ಬರಿಗೂ ಚುನಾವಣೆ ಆಯೋಗ ಬ್ಯಾಟ್ ಚಿಹ್ನೆ ನೀಡಿದೆ.
ಪುತ್ತೂರಿನ ವಿಧಾನಸಭಾ ಚುನಾವಣೆ ಸಂದರ್ಭ ಅರುಣ್ ಕುಮಾರ್ ಪುತ್ತಿಲರಿಗೂ ಇದೇ ಚಿಹ್ನೆ ಲಭಿಸಿತ್ತು. ಪುತ್ತೂರು ನಗರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಂದರ್ಭ ಚಿಹ್ನೆ ಆಯ್ಕೆ ಸಂದರ್ಭ ಎರಡು ಕಡೆಯೂ ಅರ್ಜಿಯಲ್ಲಿ ಬ್ಯಾಟ್ ಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ಚುನಾವಣಾ ಆಯೋಗ ನಾಮಪತ್ರ ಪರಿಶೀಲಿಸಿ ಬ್ಯಾಟ್ ಚಿಹ್ನೆಯನ್ನೇ ಅಧಿಕೃತಗೊಳಿಸಿದೆ.