ಡಿ.24-25 : ಶ್ರೀನಿವಾಸ ಕಲ್ಯಾಣೋತ್ಸವ | ಸವಣೂರು ಸಮಿತಿ ರಚನೆ

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರದ ಆಶ್ರಯದಲ್ಲಿ ಡಿ.24 ಹಾಗೂ 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಸವಣೂರು ಸಮಿತಿಯನ್ನು ರಚಿಸಲಾಯಿತು.

ಸಮಿತಿ ಗೌರವಾಧ್ಯಕ್ಷರಾಗಿ ವೆಂಕಟೇಶ್‍ ಭಟ್‍ ಕೊಯಿಕುಡೆ, ಸಂಚಾಲಕರಾಗಿ ಪುಷ್ಪರಾಜ ಆರೇಲ್ತಡಿ ಅಧ್ಯಕ್ಷರಾಗಿ ದೇವಿಪ್ರಸಾದ್ ಪಂಚೋಡಿ ಆಯ್ಕೆಯಾಗಿದ್ದಾರೆ.

ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೌಶಿಕ್‍ ಶಾಂತಿನಗರ, ಕಾರ್ಯದರ್ಶಿಗಳಾಗಿ ಶ್ರೀಧರ ಸುಣ್ಣಾಜೆ, ಮೋಕ್ಷಿತ್ ಇಡ್ಯಾಡಿ, ದಿಲೀಪ್‍ ಹೆಗ್ಡೆ, ಪ್ರಖ್ಯಾತ್ ಪಂಚೋಡಿ, ಚೇತನ್‍ ಇಡ್ಯಾಡಿ, ಪ್ರಶಾಂತ್‍ ನೂಜಾಜೆ, ಮಿಥುನ್‍ ಅಗರಿ, ದಯಾನಂದ, ಸುರೇಶ್‍ ಬಂಬಿಲ, ಮನು ಸವಣೂರು, ರಾಮಚಂದ್ರ ಕುಮಾರಮಂಗಲ, ಉಪಾಧ್ಯಕ್ಷರಾಗಿ ಹರಿಪ್ರಸಾದ್‍ ಅಂಗಡಿಮೂಲೆ, ಪ್ರಕಾಶ್‍ ನೂಜಾಜೆ, ಗಂಗಾಧರ ಇಡ್ಯಾಡಿ, ಕರುಣಾಕರ ಸಾರಕರೆ ಹಾಗೂ ಇತರ ಸದಸ್ಯರುಗಳನ್ನು ನೇಮಿಸಲಾಯಿತು.



































 
 

ಹಿಂದೂ ಮುಖಂಡ ಅರುಣ್ ಕುಮಾರ್‍ ಪುತ್ತಿಲ, ಪುತ್ತಿಲ ಪರಿವಾರದ ಸಂಚಾಲಕ ರವಿಕುಮಾರ್ ರೈ ಕೆದಂಬಾಡಿ ಮಠ, ಪದಾಧಿಕಾರಿಗಳಾದ ನವೀನ್‍ ರೈ, ಪ್ರಧಾನ ಕಾರ್ಯದರ್ಶಿ ಮನೀಶ್‍ ಕುಲಾಲ್‍ ಉಪಸ್ಥಿತಿಯಲ್ಲಿ ಸವಣೂರಿನಲ್ಲಿ ಸಮಿತಿಯನ್ನು ರಚಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top