ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘ ಸಹಕಾರ ಭಾರತಿ ತೆಕ್ಕೆಗೆ

ಕಾಣಿಯೂರು: ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಎಲ್ಲಾ 12 ಸ್ಥಾನಗಳಲ್ಲಿ ಜಯಭೇರಿ ಗಳಿಸಿದ್ದು, ಈ ಮೂಲಕ ಆಡಳಿತ ಸಹಕಾರಿ ಭಾರತಿ ತೆಕ್ಕೆಗೆ ಬಿದ್ದಿದೆ.

ಭಾನುವಾರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅನಂತ ಕುಮಾರ್, ಗಣೇಶ್ ಉದನಡ್ಕ, ಪರಮೇಶ್ವರ ಅನಿಲ, ಬಾಲಕೃಷ್ಣ ಇಡ್ಯಡ್ಕ, ಸುಂದರ, ವಿಶ್ವನಾಥ ದೇವಿನಗರ, ಲೋಕೇಶ್ ಆತಾಜೆ, ರತ್ನಾವತಿ, ರಮೇಶ್ ಉಪ್ಪಡ್ಕ, ವೀಣಾ ಅಂಬುಲ, ಶೀಲಾವತಿ ಮುಗರಂಜ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ದಿವಾಕರ ಜಯಭೇರಿ ಗಳಿಸಿದ್ದಾರೆ.

ಪ್ರಜಾವೇದಿಕೆಯ ಗೋಪಾಲಕೃಷ್ಣ ಪಟೇಲ್, ಮನೋಹರ, ರಾಧಾಕೃಷ್ಣ, ವಸಂತ, ಸಂದೇಶ್, ಯೋಗೀಶ್ ಆಚಾರ್ಯ, ಹರಿಂದ್ರನಾಥ ರೈ, ಅಣ್ಣು ಪರವ, ನೀಲಮ್ಮ ಬೇಂಗಡ್ಕ, ಅರುಣಾ ಶೆಟ್ಟಿ, ರೇವತಿ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಜಗದೀಶ್ ಪಿ. ಸೋಲು ಕಂಡಿದ್ದಾರೆ.



































 
 

ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ನಾಗೇಂದ್ರ ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ, ಸಹಾಯಕರಾಗಿ ಚಾರ್ವಾಕ ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಕಾರ್ಯ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top