ಪುತ್ತೂರು: ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರ ತಾಯಿ ಕೆಮ್ಮಾಯಿ ನಿವಾಸಿ ರಾಧಾ ವಾಸುದೇವ ಶೆಣೈ (91) ಶನಿವಾರ ಧನರಾದರು.
ಮೃತರು ಪುತ್ರರಾದ ಭಾಮಿ ಅಶೋಕ್ ಶೆಣೈ, ಭಾಮಿ ಜಗದೀಶ್ ಶೆಣೈ, ಭಾಮಿ ಪ್ರಕಾಶ್ ಶೆಣೈ ಮತ್ತು ಪುತ್ರಿಯರಾದ ಶೈಲಾ ನಾಯಕ್, ಶೋಭಾ ನಾಯಕ್, ಭಾರತಿ ನಾಯಕ್ ಅವರನ್ನು ಅಗಲಿದ್ದಾರೆ.
ಡಿ.ವಿ.ಸದಾನಂದ ಗೌಡ ಅವರು ತಮ್ಮ ಆರಂಭದ ರಾಜಕೀಯ ಚಟುವಟಿಕೆಗಳ ಸಂದರ್ಭದಲ್ಲಿ ಪುತ್ತೂರು ಕೆಮ್ಮಾಯಿ ಭಾಮಿ ಅಶೋಕ್ ಶೆಣೈ ಅವರ ಮನೆಯಲ್ಲೇ ತಂಗಿದ್ದರು. ಈ ಸಂದರ್ಭ ರಾಧಾ ಶೆಣೈ ಅವರು ಡಿ.ವಿ.ಸದಾನಂದ ಗೌಡ ಅವರಿಗೆ ಕೈ ತುತ್ತು ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ಸ್ಮರಿಸಿಕೊಂಡಿರುವ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ (2011ರ ಆಗಸ್ಟ್) ಪುತ್ತೂರಿಗೆ ಆಗಮಿಸಿ ಅಶೋಕ್ ಶೆಣೈ ಅವರ ಸಹೋದರರ ಮನೆಗೆ ತೆರಳಿ ಅಲ್ಲಿ ರಾಧಾ ಶೆಣೈ ಅವರ ಆಶೀರ್ವಾದ ಪಡೆದು, ತಮಗಿಷ್ಟವಾದ ಪತ್ರೋಡೆಯನ್ನು ರಾಧಾ ಶೆಣೈ ಅವರ ಕೈ ತುತ್ತುನಿಂದ ಸವಿದಿದ್ದರು. ಮಾಹಿತಿ ಪಡೆದ ಡಿ ವಿ ಪುತ್ತೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.