ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್….!

ಪುತ್ತೂರು: ಪುತ್ತೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಗಡಿಪಾರು ನೋಟೀಸ್‌ ಮತ್ತೆ ಮುಂದುವರಿದಿದೆ. ಇದೀಗ ಇನ್ನೋರ್ವ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್ ಜಾರಿ ಮಾಡಲಾಗಿದೆ.

ನೆಟ್ಟಿಣಿಗೆ ಮುಡ್ನೂರು ನಿವಾಸಿ ಪ್ರವೀಶ್‌ ಕುಮಾರ್‌ ನಾಯರ್‌ ವಿರುದ್ದ ಪುತ್ತೂರು ಸಹಾಯಕ ಆಯುಕ್ತರು ಗಡಿಪಾರು ಏಕೆ ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಪ್ರಸ್ತುತ ಅಯ್ಯಪ್ಪ ಮಾಲಾಧಾರಿಯಾಗಿರುವ ಪ್ರವೀಶ್‌ ಕುಮಾರ್‌ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತನಾಗಿದ್ದು ಎರಡು ಪ್ರಕರಣದಲ್ಲಿ  ಆರೋಪಿಯಾಗಿದ್ದಾನೆ.

ಡಿ.20 ರಂದು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಲಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್‌ ನಡೆಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top