ನೂತನ ಸಂಸತ್‌ ಭವನಕ್ಕೆ ನುಗ್ಗಿದ ಅಪರಿಚಿತ ವ್ಯಕಿಗಳು !! | ಸಂಸತ್‌ ಭವನದ ದಾಳಿಗೆ 22 ವರ್ಷದ ದಿನದಂದೆ ನಡೆದ ಘಟನೆ !!

ದೆಹಲಿ : ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಕ್ಷೇಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನದೊಳಗೆ ಭಯದ ವಾತಾವರಣ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ.

ಇದೊಂದು ಭದ್ರತಾ ವೈಪಲ್ಯವಾಗಿದ್ದು, ನೂತನ ಸಂಸತ್‌ ಭವನದ ಒಳಗೆ ನುಗ್ಗಿದ ಯುವಕ ಹಾಗೂ ಯುವತಿ ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಹಾರಿದ್ದಾರೆ. ಕೆಮಿಕಲ್ ಸ್ಪ್ರೇ ಸಿಡಿಸಿದವರನ್ನು ಸಾಗರ್‌ ಶರ್ಮಾ ಹಾಗೂ ನೀಲಂ ಕೌರ್ ಎಂದು ಎಂದು ಗುರುತಿಸಲಾಗಿದೆ.

ಶೂನ್ಯ ವೇಳೆಯಲ್ಲಿ ಒಬ್ಬ ವ್ಯಕ್ತಿ ಲೋಕಸಭೆಯ ಬೆಂಚುಗಳ ಮೇಲೆ ಜಿಗಿಯುತ್ತಿರುವುದನ್ನು ಕಂಡರೆ, ಮತ್ತೊಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಕೆಲವು ಅಶ್ರುವಾಯು ಎರಚುತ್ತಾ ಕೂಗಾಡುತ್ತಿರುವುದು ಕಂಡುಬಂದಿದೆ. ಈ ಇಬ್ಬರೂ ಸದನದಲ್ಲಿ ಭಯದ ವಾತಾವರಣ ಉಂಟು ಮಾಡಿದ್ದಾರೆ. ಇವರಿಬ್ಬರೂ ಸಂಸತ್‌ ಪ್ರತಾಪ್‌ ಸಿಂಹ ಕಚೇರಿಯಿಂದ ಪಾಸ್‌ ಪಡೆದಿದ್ದರು ಎನ್ನಲಾಗಿದೆ.



































 
 

“ಇದು ನಿಸ್ಸಂಶಯವಾಗಿ ಭದ್ರತಾ ಉಲ್ಲಂಘನೆಯಾಗಿದೆ. ಏಕೆಂದರೆ ಇಂದು ನಾವು 2001ರಲ್ಲಿ (ಸಂಸತ್ತಿನ ದಾಳಿ) ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಜನರ ಮರಣ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ” ಎಂದು ಸಂಸದ ಅಧೀರ್ ರಂಜನ್ ಚೌಧರಿ ಹೇಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top