ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ವೈಭವದ ಲಕ್ಷದೀಪೋತ್ಸವ | ಬೆಳಕಿನ ಚಿತ್ತಾರ ಮೂಡಿಸಿದ ಲಕ್ಷಾಂತರ ಹಣತೆ ದೀಪಗಳು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಮಂಗಳವಾರ ರಾತ್ರಿ ವೈಭವದಿಂದ ನಡೆಯಿತು. ದೇವಸ್ಥಾನದ ರಥಬೀದಿಯಲ್ಲಿ ನೂರಾರು  ಭಕ್ತಾದಿಗಳಿಂದ ಬೆಳಗಿದ ಲಕ್ಷಾಂತರ ಹಣತೆ ದೀಪಗಳು ಇದಕ್ಕೆ ಸಾಕ್ಷಿಯಾದವು.

ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ದೇವಸ್ಥಾನದ ಒಳಾಂಗಣದಲ್ಲಿ ಲಕ್ಷ ಬಿಲ್ವಾರ್ಚನೆ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಭಕ್ತಾದಿಗಳಿಂದ ಭಜನಾ ಸೇವೆ ನಡೆಯಿತು. ಸಂಜೆ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ದೀಪ ನಮನ ಹಾಗೂ ಧಾರ್ಮಿಕ ಸತ್ಸಂಗ ನಡೆಯಿತು.

ಸಂಜೆ 7 ಗಂಟೆಗೆ ರಥಬೀದಿಯಲ್ಲಿ ರಚಿಸಿದ ಬೃಹತ್ ರಂಗೋಲಿಗೆ ಲಕ್ಷಾಂತರ ಹಣತೆಗಳನ್ನು ಇಟ್ಟು ದೀಪ ಬೆಳಗಲಾಯಿತು. ಈ ಮೂಲಕ ರಥಬೀದಿಯಲ್ಲಿ ದೀಪದ ಬೆಳಕಿನ ಚಿತ್ತಾರವನ್ನೇ ಮೂಡಿಸಿತು. ಬಳಿಕ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆಯಿತು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top