ನರ್ಸಿಂಗ್ ಕೋರ್ಸಿಗೆ ಸೇರಿ ಒಂದೇ ವಾರದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ!

ಮಂಗಳೂರು: ನರ್ಸಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ವಳಚ್ಚಿಲಿನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿಯನ್ನು ಕೇರಳದ ಅಲೆಪ್ಪಿ ನಿವಾಸಿ ಸಚಿನ್ ಸಾಜು (19) ಎಂದು ಗುರುತಿಸಲಾಗಿದೆ.

ಡಿ. 8ರಂದು ಕಾಲೇಜಿನ ಹಾಸ್ಟೆಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥೀಯಾಗಿದ್ದ ಈತ, ನ. 30ರಂದು ಕಾಲೇಜು ಪ್ರವೇಶ ಪಡೆದಿದ್ದ. ಡಿ. 8ರಂದು ಬೆಳಿಗ್ಗಿನ ಹೊತ್ತು ಹಾಸ್ಟೆಲ್ ಕೊಠಡಿಯಲ್ಲಿ ಬೆಡ್ ಶೀಟನ್ನೇ ನೇಣಾಗಿ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಖಿನ್ನತೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗಿಂತ ಹಿಂದಿನ ಎರಡು ದಿನ ಅವರು ತರಗತಿಗೆ ಹಾಜರಾಗಿರಲಿಲ್ಲ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top