ಕೆಜಿ ಶುಲ್ಕ – ಪೋಷಕರಿಗೆ ಬರೆ!! | ವೈರಲ್ ಆಯ್ತು ಶುಲ್ಕ ವಿವರದ ಪೋಸ್ಟರ್: ನೆಟ್ಟಿಗರಿಂದ ಭಾರೀ ಟ್ರೋಲ್

ಇವತ್ತಿನ ಉನ್ನತ ಶಿಕ್ಷಣಕ್ಕಿಂತಲೂ ಕೆಜಿ ತರಗತಿಯ ಶುಲ್ಕವೇ ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ. ಶುಲ್ಕವಷ್ಟೇ ಅಲ್ಲ, ಅದರ ಜೊತೆಗೆ ಜವಾಬ್ದಾರಿಯನ್ನು ಪೋಷಕರ ಮೇಲೆ ಹೇರುವ ಪ್ರಯತ್ನ ಮಾಡಲಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಖಾಸಗಿ ಶಾಲೆಯೊಂದರ ಕೆಜಿ ತರಗತಿಯ ಶುಲ್ಕದ ವಿವರ ಅದಾಗಿದೆ. 2024-25ನೇ ಶೈಕ್ಷಣಿಕ ವರ್ಷದ ಜೂನಿಯರ್ ಕೆಜಿ ಬ್ಯಾಚ್‌ನ ಫೀಜ್ ಸ್ಟ್ರಕ್ಚರ್ ನೋಡಿ ಶಾಕ್ ಆದ ನೆಟ್ಟಿಗರು, ಅದರ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಶಾಲೆಗಳು ಪೋಷಕರನ್ನು ಸುಲಿಗೆಗೆ ಮುಂದಾಗಿರುವುದು ಇದರಿಂದ ಸ್ಪಷ್ಟವಾಗಿ ತಿಳಿದುಬರುತ್ತಿದೆ. ಇದರಲ್ಲಿ ಪೋಷಕರ ಓರಿಯಂಟೇಶನ್ ಶುಲ್ಕವಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಕ್ಕಳ ಜೊತೆಗೆ ಪೋಷಕರಿಗೂ ಓರಿಯಂಟೇಶನ್ ನಡೆಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೀ ಸ್ಟ್ರಕ್ಚರ್ ವಿವರ ಈ ರೀತಿ ಇದೆ.





















































 
 

ಚಿತ್ರದಲ್ಲಿ ತೋರಿಸಿರುವ ವಿವರಗಳ ಪ್ರಕಾರ ಪ್ರವೇಶ ಶುಲ್ಕ 55,638 ರೂ., ಕಾಶನ್ ಡೆಪಾಸಿಟ್ 30,019 ರೂ., ವಾರ್ಷಿಕ ಶುಲ್ಕ 28,314 ರೂ., ಅಭಿವೃದ್ಧಿ ಶುಲ್ಕ 13,948 ರೂ., ಬೋಧನಾ ಶುಲ್ಕ 23,737 ರೂ. ಮತ್ತು ಪೋಷಕರ ಓರಿಯಂಟೇಶನ್ ಶುಲ್ಕ 8400 ರೂ. ಎಂದು ಬರೆಯಲಾಗಿದೆ

ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ

ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜನರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರೆ, “ಇದು ನರ್ಸರಿಯಾ ಅಥವಾ ಬಿ.ಟೆಕ್ ಫೀಜ್ ಸ್ಟ್ರಕ್ಚರಾ?” ಎಂದು ಪ್ರಶ್ನಿಸಿದ್ದರೆ,  ಇನ್ನೊಬ್ಬರು “ಕಂತುಗಳಲ್ಲಿ ಪಾವತಿಸಲು ಸಾಧ್ಯವಿಲ್ಲವೇ?” ಎಂದು ಪ್ರತಿಕ್ರಿಯಿಸಿದ್ದಾರೆ. ಮೂರನೇ ಬಳಕೆದಾರರು, “ನನ್ನ 10ನೇ ತರಗತಿಯ ಶುಲ್ಕವು ತಿಂಗಳಿಗೆ 500 ರೂ. ಆಗಿತ್ತು. ನಾನು ದುಬಾರಿ ಶಾಲೆಯಲ್ಲಿ ಓದುತ್ತಿದ್ದೇನೆ ಎಂದು ನಾನು ಭಾವಿಸಿದ್ದೆ” ಎಂದಿದ್ದಾರೆ. “ನರ್ಸರಿ ಪ್ರವೇಶಕ್ಕಾಗಿ ನಾನು ಸಾರಿಗೆ, ಆಹಾರ ಮತ್ತು ದೇಣಿಗೆ ಸೇರಿದಂತೆ ಒಟ್ಟು 1,95,000 ರೂ. ಪಾವತಿಸಿದ್ದೇನೆ” ಎಂದಿದ್ದಾರೆ ಮತ್ತೊಬ್ಬರು. ‘ಈ ಶುಲ್ಕ ಪಾವತಿಸಲು ನಮಗೆ ಲೋನ್ ತೆಗೆದುಕೊಳ್ಳಬೇಕಾಗುತ್ತದೆ” ಎಂದಿದ್ದಾರೆ ಇನ್ನೊಬ್ಬರು.

ಪೆರೆಂಟ್ಸ್ ಒರಿಯಂಟೇಶನ್ ಎಂದರೇನು?

ಪೋಷಕರ ಓರಿಯಂಟೇಶನ್ ಕಾರ್ಯಕ್ರಮವನ್ನು ಸಾಮಾನ್ಯವಾಗಿ ಪ್ರತಿ ತಿಂಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಇದರಿಂದ ಪೋಷಕರು ತಮ್ಮ ಮಗುವಿನ ಪ್ರಗತಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಮತ್ತು ಶಾಲೆಯಲ್ಲಿ ಅನುಸರಿಸುವ ವಿವಿಧ ಬೋಧನಾ ಯೋಜನೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top