ಪುತ್ತೂರು: ಮರದಿಂದ ಅಡಿಕೆ ಕೀಳುವ ಸಂದರ್ಭ ಆಕಸ್ಮತ್ತಾಗಿ ಮರದಿಂದ ಬಿದ್ದು ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಬೆಟ್ಟಂಪಾಡಿಯಲ್ಲಿ ನಡೆದಿದೆ.
ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ ನಿವಾಸಿ ಸಯ್ಯದ್ (45) ಮೃತಪಟ್ಟವರು.
ಬೆಟ್ಟಂಪಾಡಿಯ ಕೃಷಿಕರೋರ್ವರ ಮನೆಗೆ ಸಯ್ಯದ್ ಅವರು ಅಡಿಕೆ ಕೀಳಲು ತೆರಳಿದ್ದು, ಮರದಿಂದ ಆಕಸ್ಮಿಕವಾಗಿ ಮರದಿಂದ ಕಾಲುಜಾರಿ ಬಿದ್ದರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.